ಪ್ರತಿ ತಿಂಗಳು ಜನಸಾಮಾನ್ಯರಿಗೆ ಸಂಬಂಧಿಸಿದ ಕೆಲ ನಿಯಮಗಳಲ್ಲಿ ಬದಲಾವಣೆಯಾಗ್ತಿರುತ್ತದೆ. ಜುಲೈ ತಿಂಗಳಿನಲ್ಲಿ ಕೆಲ ಮಹತ್ವದ ಬದಲಾವಣೆಯಾಗ್ತಿದೆ. ಅದು ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಲಿದೆ.
ಜುಲೈ 1 ರಂದು ಎಲ್‌ಪಿಜಿ ಸಿಲಿಂಡರ್‌ನ ಹೊಸ ಬೆಲೆಗಳು ಬಿಡುಗಡೆಯಾಗಲಿದೆ. ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲನೆಯ ದಿನ ಎಲ್‌ಪಿಜಿ ಬೆಲೆ ನಿಗದಿಪಡಿಸುತ್ತವೆ. ಜುಲೈನಲ್ಲಿ ಕಂಪನಿಗಳು ಎಲ್ಪಿಜಿ ಮತ್ತು ವಾಣಿಜ್ಯ ಸಿಲಿಂಡರ್ ಗಳ ಬೆಲೆ ಇಳಿಸಲಿದೆಯಾ ಎಂಬುದನ್ನು ಕಾದು ನೋಡಬೇಕು.
ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‌ಬಿಐನ ಕೆಲ ನಿಯಮಗಳು ಜುಲೈ ಒಂದರಿಂದ ಬದಲಾಗ್ತಿದೆ. ಬ್ಯಾಂಕ್ ಶಾಖೆಯಿಂದ ಹಣ ವಿತ್ ಡ್ರಾ ಮತ್ತು ಚೆಕ್ ಬುಕ್ ನಿಯಮ ಬದಲಾಗ್ತಿದೆ. ಹೊಸ ನಿಯಮಗಳು ಜುಲೈ 1 ರಿಂದ ಜಾರಿಗೆ ಬರಲಿದೆ. ಬಿಎಸ್‌ಬಿಡಿ ಖಾತೆದಾರರಿಗೆ ಎಟಿಎಂ ಮತ್ತು ಬ್ಯಾಂಕ್ ಶಾಖೆಗಳನ್ನು ಒಳಗೊಂಡಂತೆ ಪ್ರತಿ ತಿಂಗಳು ನಾಲ್ಕು ಉಚಿತ ನಗದು ವಿತ್ ಡ್ರಾ ಲಭ್ಯವಿರುತ್ತದೆ. ಉಚಿತ ಮಿತಿಯ ನಂತರ ಪ್ರತಿ ವಹಿವಾಟಿಗೆ ಬ್ಯಾಂಕ್ 15 ರೂಪಾಯಿ ಮತ್ತು ಜಿಎಸ್ಟಿ ವಿಧಿಸುತ್ತದೆ.
ಎಸ್‌ಬಿಐ, ಬಿಎಸ್‌ಬಿಡಿ ಖಾತೆದಾರರಿಗೆ ಹಣಕಾಸಿನ ವರ್ಷದಲ್ಲಿ 10 ಚೆಕ್ ಬುಕ್ ಗಳನ್ನು ಉಚಿತವಾಗಿ ನೀಡುತ್ತದೆ. 10 ಚೆಕ್ ಬುಕ್ ನಂತ್ರ ಬ್ಯಾಂಕ್ ಶುಲ್ಕ ವಿಧಿಸುತ್ತದೆ. ಮತ್ತೆ ಹತ್ತು ಚೆಕ್ ಗೆ 40 ರೂಪಾಯಿ ಮತ್ತು ಜಿಎಸ್ಟಿ ವಿಧಿಸುತ್ತದೆ. 25 ಚೆಕ್ ಗೆ ಬ್ಯಾಂಕ್ 75 ರೂಪಾಯಿ ಮತ್ತು ಜಿಎಸ್ಟಿ ವಿಧಿಸುತ್ತದೆ. ಹಿರಿಯ ನಾಗರಿಕರಿಗೆ ಚೆಕ್ ಬುಕ್ ಹೊಸ ನಿಯಮದಿಂದ ವಿನಾಯಿತಿ ಸಿಕ್ಕಿದೆ.
ಜುಲೈ ಒಂದರಿಂದ ಆದಾಯ ತೆರಿಗೆ ನಿಯಮ ಬದಲಾಗಲಿದೆ. ಜೂನ್ 30 ರೊಳಗೆ ರಿಟರ್ನ್ ಸಲ್ಲಿಸದಿದ್ದರೆ, ಜುಲೈ 1 ರಿಂದ ಡಬಲ್ ಟಿಡಿಎಸ್ ಪಾವತಿಸಬೇಕಾಗುತ್ತದೆ. ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31 ಆದರೆ ಈ ದಿನಾಂಕವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ.
ಕೆನರಾ ಬ್ಯಾಂಕ್, ಜುಲೈ 1 ರಿಂದ ಸಿಂಡಿಕೇಟ್ ಬ್ಯಾಂಕಿನ ಐಎಫ್‌ಎಸ್‌ಸಿ ಕೋಡ್ ಬದಲಾಯಿಸಲಿದೆ. ಸಿಂಡಿಕೇಟ್ ಬ್ಯಾಂಕಿನ ಎಲ್ಲಾ ಗ್ರಾಹಕರು ತಮ್ಮ ಶಾಖೆಯಿಂದ ನವೀಕರಿಸಿದ ಐಎಫ್‌ಎಸ್‌ಸಿ ಕೋಡ್ ಪರಿಶೀಲಿಸುವಂತೆ ಸೂಚನೆ ನೀಡಲಾಗಿದೆ. ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ವಿಲೀನಗೊಂಡ ನಂತರ ಎಲ್ಲಾ ಶಾಖೆಗಳ ಐಎಫ್‌ಸಿ ಕೋಡ್ ಬದಲಾಗಿದೆ.