ಡಿಸೆಂಬರ್ ಒಂದು ಅಂದರೆ ನಾಳೆಯಿಂದ ಹಲವು ನಿಯಮಗಳು ಬದಲಾಗಲಿವೆ. ಈ ಬದಲಾವಣೆ ನೇರವಾಗಿ ಸಾರ್ವಜನಿಕರ ಜೀವನದ ಮೇಲೆ ಪರಿಣಾಮ ಬೀರಲಿದೆ.
ಯುಎಎನ್-ಆಧಾರ್ ಲಿಂಕ್ : ಉದ್ಯೋಗದಲ್ಲಿದ್ದರೆ ಮತ್ತು ಯುನಿವರ್ಸಲ್ ಅಕೌಂಟ್ ನಂಬರ್ ಹೊಂದಿದ್ದರೆ ಆಧಾರ್ ಸಂಖ್ಯೆಗೆ ಲಿಂಕ್ ಮಾಡಲು ಇಂದು ಕೊನೆ ದಿನ. ಡಿಸೆಂಬರ್ ಒಂದರಿಂದ, ಯುಎಎನ್ ಮತ್ತು ಆಧಾರ್ ಲಿಂಕ್ ಮಾಡಿದ ನೌಕರರಿಗೆ ಮಾತ್ರ ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ ಸಲ್ಲಿಸಲು ಕಂಪನಿಗೆ ಸೂಚಿಸಲಾಗಿದೆ. ಆಧಾರ್ ಲಿಂಕ್ ಮಾಡದ ಉದ್ಯೋಗಿಗಳಿಗೆ ಇಸಿಆರ್ ಫೈಲ್ ಮಾಡಲು ಸಾಧ್ಯವಾಗುವುದಿಲ್ಲ.
ಮನೆ ಸಾಲ : ಹಬ್ಬದ ಸಮಯದಲ್ಲಿ ಅನೇಕ ಬ್ಯಾಂಕ್ ಗಳು ಸಂಸ್ಕರಣಾ ಶುಲ್ಕ, ಕಡಿಮೆ ಬಡ್ಡಿದರ ಸೇರಿದಂತೆ ಗೃಹ ಸಾಲಕ್ಕೆ ಸಂಬಂಧಿಸಿದಂತೆ ಅನೇಕ ಕೊಡುಗೆ ನೀಡಿದ್ದವು. ಹೆಚ್ಚಿನ ಬ್ಯಾಂಕ್ಗಳ ಕೊಡುಗೆ ಡಿಸೆಂಬರ್ 31 ರಂದು ಮುಕ್ತಾಯಗೊಳ್ಳುತ್ತಿವೆ. ಆದರೆ ಎಲ್ಐಸಿ ಹೌಸಿಂಗ್ ಫೈನಾನ್ಸ್ ಆಫರ್ ನವೆಂಬರ್ 30ಕ್ಕೆ ಕೊನೆಗೊಳ್ಳಲಿದೆ.
ಎಸ್ಬಿಐ ಕ್ರೆಡಿಟ್ ಕಾರ್ಡ್ : ಎಸ್ಬಿಐ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ, ಡಿಸೆಂಬರ್ 1 ರಿಂದ, ಎಸ್ಬಿಐ ಕ್ರೆಡಿಟ್ ಕಾರ್ಡ್ನೊಂದಿಗೆ ಇಎಂಐ ಶಾಪಿಂಗ್ ದುಬಾರಿಯಾಗಲಿದೆ.
ಗ್ಯಾಸ್ ಸಿಲಿಂಡರ್ ಬೆಲೆ : ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಗ್ಯಾಸ್ ಸಿಲಿಂಡರ್ಗಳ ಬೆಲೆ ನಿಗದಿಯಾಗುತ್ತದೆ. ವಾಣಿಜ್ಯ ಮತ್ತು ಗೃಹಬಳಕೆಯ ಸಿಲಿಂಡರ್ಗಳ ಹೊಸ ದರಗಳನ್ನು ತಿಂಗಳ ಮೊದಲನೆಯ ದಿನ ನೀಡಲಾಗುತ್ತದೆ.