ಮೊದಲ ಪೂಜೆ ನಡೆಯುವುದು ಗಣೇಶನಿಗೆ. ಯಾವುದೇ ದೊಡ್ಡ ಪೂಜೆಯಿರಲಿ, ಸಣ್ಣ ಪೂಜೆಯಿರಲಿ ಮೊದಲು ಗಣೇಶನ ಪೂಜೆ ನಡೆಯುತ್ತದೆ. ಗಣೇಶ ವಿಘ್ನ ವಿನಾಶಕ. ಆಗಸ್ಟ್ 31ರಂದು ಈ ಬಾರಿ ಗಣೇಶ ಚತುರ್ಥಿ ಆಚರಿಸಲಾಗ್ತಿದೆ.
ಗಣೇಶನ ಭಕ್ತರು ಬೆಳಿಗ್ಗೆ ಬ್ರಹ್ಮ ಮುಹೂರ್ತದಲ್ಲಿ ಏಳಬೇಕು. ಎದ್ದು ಸ್ನಾನ ಮಾಡಿ ಶುದ್ಧ ವಸ್ತ್ರವನ್ನು ಧರಿಸಬೇಕು. ನೆನಪಿಡಿ ಕೆಂಪು ವಸ್ತ್ರ ಗಣೇಶನಿಗೆ ಪ್ರಿಯ. ಶುದ್ಧ ಆಸನದಲ್ಲಿ ಕುಳಿತುಕೊಳ್ಳಬೇಕು. ನಿಮ್ಮ ಮುಖ ಪೂರ್ವ ಅಥವಾ ಉತ್ತರಕ್ಕಿರಲಿ. ನಂತ್ರ ಪಂಚಾಮೃತಗಳಿಂದ ಗಣೇಶನ ಅಭಿಷೇಕ ಮಾಡಬೇಕು. ಶ್ರೀಗಂಧ, ಅಕ್ಷತೆ, ದರ್ಬೆಯನ್ನು ಅರ್ಪಿಸಿ. ಮೋದಕವನ್ನು ನೈವೇದ್ಯ ಮಾಡಿ. ಕರ್ಪೂರ ಬೆಳಗಿ ಪೂಜೆ ಮಾಡಿ.
ಗಣೇಶನ ಸ್ಥಾಪನೆಯಾದ್ಮೇಲೆ ಹಸಿರು ದಾರವನ್ನು ತೆಗೆದುಕೊಂಡು ಅದಕ್ಕೆ ಏಳು ಗಂಟು ಹಾಕಿ. ಅದನ್ನು ಗಣೇಶನ ಪಾದದ ಬಳಿ ಇಡಿ. ವಿಸರ್ಜನೆಗೆ ಮುನ್ನ ದಾರವನ್ನು ತೆಗೆದು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಿ. ಸಂಪತ್ತು, ಸಂತೋಷ, ಸಮೃದ್ಧಿ, ಯಶಸ್ಸು, ಖ್ಯಾತಿಯನ್ನು ಇದು ತರುತ್ತದೆ.