ಹುಬ್ಬಳ್ಳಿ: ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ನಡೆಸುವ ಪುಂಡರ ವಿರುದ್ಧ ಹುಬ್ಬಳ್ಳಿ-ಧಾರವಾಡ ಪೊಲೀಸರು ಸಮರ ಮುಂದುವರೆಸಿದ್ದು, ವ್ಹೀಲಿಂಗ್ ಮಾಡುವ ಕಿಡಿಗೇಡಿಗಳನ್ನು ಹೆಡೆಮುರಿಕಟ್ಟಿದ್ದಾರೆ. ಇದನ್ನು ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿದಿರುವ ಬೆನ್ನಲ್ಲೇ ವಿಶೇಷ ರೀತಿಯಲ್ಲಿ ಹುಬ್ಬಳ್ಳಿ-ಧಾರವಾಡ ಸಂಚಾರಿ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಚಂದ್ರಯಾನ ಯಶಸ್ಸು ಹಿನ್ನೆಲೆಯಲ್ಲಿ ಅದನ್ನೇ ಹೋಲಿಸಿ ತಾವು ಕೂಡ ಯಶಸ್ವಿಯಾಗಿ ಬೈಕ್ ವ್ಹೀಲಿಂಗ್ ನಡೆಸುತ್ತಿದ್ದ ಪುಂಡನನ್ನು ಹಿಡಿದು ಆತನ ಬೈಕ್ ಲ್ಯಾಂಡ್ ಮಾಡಿದ್ದಾಗಿ ಕೆಜಿಎಫ್ ಸಿನಿಮಾ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಮೂಲಕ ಹುಬ್ಬಳ್ಳಿ-ಧಾರವಾಡ ಪೊಲೀಸರು ವಿಡಿಯೋ ಹಂಚಿಕೊಂಡಿದ್ದಾರೆ.
ಅವತ್ತು ಎರಡು ಘಟನೆಗಳು ನಡೆದವು…… 1.ನಮ್ಮ ಹೆಮ್ಮೆಯ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ನೆಲದ ಮೇಲೆ ಲ್ಯಾಂಡ್ ಆಯ್ತು……2.ಬೈಕ್ ನ ಚಕ್ರವನ್ನು ಮೇಲೆತ್ತಿ wheeling ಮಾಡುತ್ತಿದ್ದವನನ್ನು ಹಿಡಿದು ಆತನನ್ನು ನೆಲಕ್ಕೆ ಲ್ಯಾಂಡ್ ಮಾಡಿಸಲಾಯ್ತು ಎಂದು ಕ್ರಿಯೇಟಿವ್ ಆಗಿ ಹುಬ್ಬಳ್ಳಿ-ಧಾರವಾಡ ಪೊಲೀಸರು ವಿಡಿಯೋ ಹಂಚಿಕೊಂಡು ಚಂದ್ರಯಾನ ಯಶಸ್ಸಿನ ಜೊತೆಗೆ ವ್ಹೀಲಿಂಗ್ ಪುಂಡರನ್ನು ತಾವು ಯಶಸ್ವಿಯಾಗಿ ಹಿಡಿದಿರುವ ಬಗ್ಗೆ ಹೇಳಿದ್ದಾರೆ.
ಈ ಹಿಂದೆಯೂ ಹುಬ್ಬಳ್ಳಿ-ಧಾರವಾಡ ಪೊಲೀಸರು ವ್ಹೀಲಿಂಗ್ ಮಾಡುವವರನ್ನು ಹಾಗೂ ಯುವತಿಯರನ್ನು ಚುಡಾಯಿಸುತ್ತಿದ್ದ ಕಿಡಿಗೇಡಿಗಳನ್ನು ಹಿಡಿದು ಬಿಫೋರ್ ಹಾಗೂ ಆಫ್ಟರ್ ಎಫೆಕ್ಟ್ ಎಂದು ವಿಡಿಯೋ ಹಂಚಿಕೊಂಡಿದ್ದರು.