ಬೆಂಗಳೂರು: ಚಂದ್ರಯಾನ-3 ಯಶಸ್ಸಿನ ಮತ್ತೊಂದು ದೊಡ್ಡ ಅಪ್ ಡೇಟ್ ಲಭ್ಯವಾಗಿದ್ದು, ಜಗತ್ತಿನ ಇತಿಹಾಸದಲ್ಲಿಯೇ ಭಾರತ ಮಹತ್ವದ ಹೆಜ್ಜೆ ಇಟ್ಟಿದೆ. ಚಂದ್ರನಲ್ಲಿ ತಾಪಮಾನ ಪರೀಕ್ಷೆ ವರದಿಯನ್ನು ಪ್ರಜ್ಞಾನ್ ರೋವತ್ ಕಳುಹಿಸಿದೆ.
ಚಂದ್ರನ ಅಂಗಳದಲ್ಲಿ ಸಂಶೋಧನೆ ಆರಂಭಿಸಿರುವ ಪ್ರಜ್ಞಾನ್ ರೋವರ್, ಹಗಲಿನಲ್ಲಿ ಚಂದ್ರನ ತಾಪಮಾನದ ಬಗ್ಗೆ ಪತ್ತೆ ಮಾಡಿದ್ದು, ತಾಪಮಾನ ಪರೀಕ್ಷಾ ವರದಿಯನ್ನು ಇಸ್ರೋಗೆ ಕಳುಹಿಸಿದೆ.
10 ಸೆನ್ಸರ್ ಗಳ ಮೂಲಕ ಚಂದ್ರನ ನೆಲವನ್ನು ಕೊರೆದು ತಾಪಮಾನ ಪರೀಕ್ಷಿಸಲಾಗಿದ್ದು, ಸುಮಾರು 10 ಸೆ.ಮೀ ನಷ್ಟು ಕೊರೆದು ಪರೀಕ್ಷಿಸಲಾಗಿದೆ. ಹಗಲಿನಲ್ಲಿ ಚಂದ್ರನಲ್ಲಿ 50 ಡಿಗ್ರಿಯಿಂದ ಮೈನಸ್ 10 ಸೆಲ್ಸಿಯಸ್ ನಷ್ಟು ತಾಪಮಾನ ಇರುತ್ತದೆ. ಪ್ರಜ್ಞಾನ್ ರೋವರ್ ಚಂದ್ರನ ದಕ್ಷಿಣ ಧ್ರುವದಲ್ಲಿ ChaSTE ಪರೀಕ್ಷೆ ನಡೆಸುತ್ತಿದೆ ಎಂದು ಇಸ್ರೋ ಮಾಹಿತಿ ಹಂಚಿಕೊಂಡಿದೆ.