ಬೆಂಗಳೂರು : ಭಾರತೀಯ ಬಾಹ್ಯಕಾಶ ಸಂಸ್ಥೆ (ISRO)ದ ಮಹತ್ವಾಕಾಂಕ್ಷಿ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವಕ್ಕೆ ತಲುಪಲು ಹಂತಿಮ ಹಂತಕ್ಕೆ ಬಂದಿದ್ದು,ವಿಕ್ರಮ್ ಲ್ಯಾಂಡರ್ ಸಂಜೆ 6.04 ಗಂಟೆ ವೇಳೆಗೆ ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಯಲು ಸಜ್ಜಾಗಿದೆ.
ವಿಕ್ರಮ್ ಲ್ಯಾಂಡರ್ ನ ವೇಗವನ್ನು ತಗ್ಗಿಸುವ ಕಾರ್ಯ ಸಂಜೆ 5.45ರಿಂದಲೇ ಆರಂಭವಾಗಲಿದೆ.ಇನ್ನು ಕೆಲವೇ ಗಂಟೆಗಳಲ್ಲಿ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಸ್ಪರ್ಶ ಮಾಡಲಿದೆ.
ನೀವು ಈ ಪ್ರಸಾರವನ್ನು ನಿಮ್ಮ ಫೋನ್ನಲ್ಲಿಯೂ ಲೈವ್ ವೀಕ್ಷಿಸಬಹುದು. ಇದರ ಲೈವ್ ಸ್ಟ್ರೀಮಿಂಗ್ ಅನ್ನು 6.04 ನಿಮಿಷಗಳಿಂದ ಮಾಡಲಾಗುತ್ತದೆ. ಇದು ಡಿಡಿ ನ್ಯಾಷನಲ್ ಟಿವಿ ಮತ್ತು ಇತರ ಸುದ್ದಿ ವಾಹಿನಿಗಳಲ್ಲಿ ನೇರ ಪ್ರಸಾರವಾಗಲಿದೆ. ನೀವು ಟಿವಿಯ ಬಳಿ ಇಲ್ಲದಿದ್ದರೆ, ನಿಮ್ಮ ಫೋನ್ನಲ್ಲಿ isro.gov.in ಹೋಗುವ ಮೂಲಕ ನೀವು ಈ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು. ಇದನ್ನು ಇಸ್ರೋದ ಯೂಟ್ಯೂಬ್ ಚಾನೆಲ್ ಮತ್ತು ಫೇಸ್ಬುಕ್ ಪುಟದಲ್ಲಿಯೂ ನೋಡಬಹುದು. ನೀವು ನೇರವಾಗಿ ಅವರ ವೆಬ್ಸೈಟ್ಗೆ ಲಾಗಿನ್ ಆಗಬಹುದು ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಇಸ್ರೋ ಪುಟವನ್ನು ತೆರೆಯಬಹುದು. ಅಲ್ಲಿ ನೀವು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಬಹುದು. ಇಂಟರ್ನೆಟ್ನಲ್ಲಿ ಇನ್ನೂ ಅನೇಕ ವೆಬ್ಸೈಟ್ಗಳು ಅದರ ನೇರ ಪ್ರಸಾರವನ್ನು ತೋರಿಸುತ್ತವೆ.
ಚಂದ್ರಯಾನದ ಲ್ಯಾಂಡರ್ಗಳ ಲ್ಯಾಂಡಿಂಗ್ ಕಾರ್ಯಾಚರಣೆಯ ನೇರಪ್ರಸಾರವು ಸಂಜೆ 5.20ಕ್ಕೆ ಪ್ರಾರಂಭವಾಗಲಿದೆ. ಇಸ್ರೊ ಅಧಿಕೃತ ವೆಬ್ಸೈಟ್, ಯೂಟ್ಯೂಬ್ ಚಾನೆಲ್ ಫೇಸ್ಬುಕ್ ಪುಟದಲ್ಲಿ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದೆ. ಅಲ್ಲದೆ, ಡಿಡಿ ನ್ಯಾಷನಲ್ ವಾಹಿನಿಯಲ್ಲೂ ಸಂಜೆ 5.27ರಿಂದ ಲ್ಯಾಂಡಿಂಗ್ನ ನೇರಪ್ರಸಾರ ಲಭ್ಯವಿರುತ್ತದೆ.