ಚಂದ್ರನ ನೆಲದಲ್ಲಿ ‘ಪ್ರಜ್ಞಾನ್ ರೋವರ್’ ಇಳಿದ ದೃಶ್ಯವನ್ನು ಇಸ್ರೋ ಬಿಡುಗಡೆ ಮಾಡಿದೆ. ಲ್ಯಾಂಡರ್ ಇಮೇಜರ್ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಚಂದ್ರನ ನೆಲದಲ್ಲಿ ‘ಪ್ರಜ್ಞಾನ್ ರೋವರ್’ ಇಳಿದ ಮತ್ತೊಂದು ವಿಡಿಯೋವನ್ನು ಇಸ್ರೋ ಬಿಡುಗಡೆ ಮಾಡಿದೆ.
ಪ್ರಜ್ಞಾನ್ ರೋವರ್ ಕಾರ್ಯಾಚರಣೆಯ ಫೋಟೋವೊಂದನ್ನು ಬಿಡುಗಡೆ ಮಾಡಿದ್ದ ಇಸ್ರೋ ಇದೀಗ ಪ್ರಜ್ಞಾನ್ ರೋವರ್’ ಇಳಿದ ದೃಶ್ಯವನ್ನು ಬಿಡುಗಡೆ ಮಾಡಿದೆ.
ಭಾರತೀಯ ಬಾಹ್ಯಕಾಶ ಸಂಸ್ಥೆ (ISRO) ಚಂದ್ರಯಾನ-3 ಯಶಸ್ವಿಯಾದ ಬೆನ್ನಲ್ಲೇ ವಿಕ್ರಮ್ ಲ್ಯಾಂಡರ್ ನಿಂದ ಹೊರಬಂದಿರುವ ಪ್ರಜ್ಞಾನ್ ರೋವರ್ ಅಧ್ಯಯನ ಶುರು ಮಾಡಿದೆ. ಚಂದ್ರನ ಅಂಗಳದಲ್ಲಿ ಕಾರ್ಯಾಚರಣೆ ಆರಂಭಿಸಿರುವ ಪ್ರಜ್ಞಾನ್ ರೋವರ್ ಇದೀಗ ಚಂದ್ರನ ಮೇಲೆ ಚಂದ್ರಯಾನ-2 ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಪತ್ತೆಯಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.