ಬೆಂಗಳೂರು: ಚಂದ್ರಯಾನ -3 ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಕೌಂಟ್ ಡೌನ್ ಶುರುವಾಗಿದೆ. ಲ್ಯಾಂಡರ್ ಮಾಡ್ಯೂಲ್- ವಿಕ್ರಮ್ ಆಗಸ್ಟ್ 23 ಅಂದರೆ ನಾಳೆ ಸಂಜೆ 6 ಗಂಟೆಗೆ ಚಂದ್ರನನ್ನು ಸ್ಪರ್ಶಿಸುವ ನಿರೀಕ್ಷೆಯಿದೆ.
ಈ ಹಿನ್ನೆಲೆ ನಗರದ ಹಲವಾರು ಜನರು ಮಂಗಳವಾರ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಿ ಚಂದ್ರಯಾನ-3 ಮಿಷನ್ ಯಶಸ್ಸಿಗಾಗಿ ಪ್ರಾರ್ಥಿಸಿದರು.
ಬಸವನಗುಡಿಯ ವಿನಾಯಕ ದೇವಸ್ಥಾನದಲ್ಲಿ ಧ್ವಜ ಮತ್ತು ಉಡಾವಣಾ ವಾಹನದ ಪೋಸ್ಟರ್ ಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮಿಷನ್ ಶೇಕಡಾ 100 ರಷ್ಟು ಯಶಸ್ವಿಯಾಗಲಿ ಎಂದು ಭಕ್ತರು ಪ್ರಾರ್ಥಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಚಂದ್ರಯಾನ -3 ಮಿಷನ್ ಯಶಸ್ಸಿಗಾಗಿ ವಿಶೇಷ ಪೂಜೆ ನಡೆಸಿತು.ಚಂದ್ರನ ಹಲವಾರು ಚಿತ್ರಗಳನ್ನು ಇಸ್ರೋ ಸೋಮವಾರ ಬಿಡುಗಡೆ ಮಾಡಿದೆ.ಚಂದ್ರಯಾನ -3 ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಕೌಂಟ್ ಡೌನ್ ಶುರುವಾಗಿದೆ. ಲ್ಯಾಂಡರ್ ಮಾಡ್ಯೂಲ್- ವಿಕ್ರಮ್ ಆಗಸ್ಟ್ 23 ಅಂದರೆ ನಾಳೆ ಸಂಜೆ 6 ಗಂಟೆಗೆ ಚಂದ್ರನನ್ನು ಸ್ಪರ್ಶಿಸುವ ನಿರೀಕ್ಷೆಯಿದೆ.