ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಮಾರ್ಚ್ 15ರಿಂದ 20ರವರೆಗೆ ನಡೆಯಲಿರುವ ರೇಣುಕಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ಬೆತ್ತಲೆ ಸೇವೆಗೆ ಜಿಲ್ಲಾಡಳಿತ ನಿಷೇಧ ಹೇರಿದೆ.
ವರದಾ ನದಿಯಲ್ಲಿ ಧಾರ್ಮಿಕ ಸ್ನಾನ, ದೇವರಿಗೆ ಮುಡಿ ಕೊಡುವುದು, ಪಡ್ಲಿಗಿ ತುಂಬಿಸುವುದು ಸೇರಿದಂತೆ ಕೆಲವು ಆಚರಣೆಗಳನ್ನು ನಿಷೇಧಿಸಲಾಗಿದೆ. ಈ ನಿಷೇಧವು ಶ್ರೀ ರೇಣುಕಾದೇವಿಯ ರಥೋತ್ಸವ ಹಾಗೂ ಇತರ ಪೂಜಾ ಕಾರ್ಯ ಮತ್ತು ಧಾರ್ಮಿಕ ವಿಧಿ ವಿಧಾನಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.