alex Certify 580 ವರ್ಷಗಳ ನಂತ್ರ ಸಂಭವಿಸುತ್ತಿದೆ ಸುದೀರ್ಘ ಚಂದ್ರಗ್ರಹಣ…! ಇಲ್ಲಿದೆ ಇದರ ವಿಶೇಷತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

580 ವರ್ಷಗಳ ನಂತ್ರ ಸಂಭವಿಸುತ್ತಿದೆ ಸುದೀರ್ಘ ಚಂದ್ರಗ್ರಹಣ…! ಇಲ್ಲಿದೆ ಇದರ ವಿಶೇಷತೆ

ಈ ವರ್ಷದ ನವೆಂಬರ್ 19ರಂದು ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಈ ವರ್ಷದ ಮೂರನೇ ಗ್ರಹಣ ಮತ್ತು ಎರಡನೇ ಚಂದ್ರಗ್ರಹಣ ಇದಾಗಿದೆ. ಇದು ಹಲವು ವಿಶೇಷತೆಗಳನ್ನು ಹೊಂದಿದೆ. ಈ ಚಂದ್ರಗ್ರಹಣ ಸಂಭವಿಸಿ 15 ದಿನಕ್ಕೆ ಅಂದ್ರೆ ಡಿಸೆಂಬರ್ 4ರಂದು ಸೂರ್ಯಗ್ರಹಣ ಸಂಭವಿಸಲಿದೆ.

ನವೆಂಬರ್ 19 ರ ಚಂದ್ರಗ್ರಹಣ ಬಹಳ ವಿಶೇಷವಾಗಿದೆ. 580 ವರ್ಷಗಳ ನಂತರ ಇಂತಹ ಚಂದ್ರಗ್ರಹಣ ಸಂಭವಿಸಲಿದೆ. ಕಳೆದ 580 ವರ್ಷಗಳ ನಂತ್ರ ಸಂಭವಿಸುತ್ತಿರುವ ಸುದೀರ್ಘ ಭಾಗಶಃ ಚಂದ್ರಗ್ರಹಣ ಇದಾಗಿದೆ. ಈ ಚಂದ್ರಗ್ರಹಣದ ಅವಧಿ ಸುಮಾರು ಮೂರೂವರೆ ಗಂಟೆಗಳಿರುತ್ತದೆ.

ಭಾರತದಲ್ಲಿ ಈ ಚಂದ್ರಗ್ರಹಣವು ಮಧ್ಯಾಹ್ನ 12.48 ರಿಂದ 4.17 ನಿಮಿಷಗಳವರೆಗೆ ಇರಲಿದೆ. ಭಾಗಶಃ ಚಂದ್ರಗ್ರಹಣವು ಭಾರತದಲ್ಲಿ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಮಾತ್ರ ಗೋಚರಿಸಲಿದೆ. ಈ ಹಿಂದೆ 1440 ರಲ್ಲಿ ಇಂತಹ ದೀರ್ಘ ಭಾಗಶಃ ಚಂದ್ರಗ್ರಹಣ ಸಂಭವಿಸಿತ್ತು.

ನವೆಂಬರ್ 19ರ ನಂತ್ರ ದೀರ್ಘ ಚಂದ್ರಗ್ರಹಣ ಫೆಬ್ರವರಿ 8, 2669 ರಂದು ಸಂಭವಿಸಲಿದೆ. 648 ವರ್ಷಗಳ ನಂತರ ಇಂತಹ ಗ್ರಹಣ ಸಂಭವಿಸಲಿದೆ. ಚಂದ್ರಗ್ರಹಣದ ದೀರ್ಘಾವಧಿಯ ಕಾರಣದಿಂದಾಗಿ, ಜನರು ಈ ಅದ್ಭುತವಾದ ಆಕಾಶ ವಿದ್ಯಮಾನವನ್ನು ಆರಾಮವಾಗಿ ವೀಕ್ಷಣೆ ಮಾಡಬಹುದು.

ಭೂಮಿಯಿಂದ ಚಂದ್ರನ ಹೆಚ್ಚಿನ ದೂರದಲ್ಲಿರುವ ಕಾರಣ ಸುದೀರ್ಘ ಚಂದ್ರಗ್ರಹಣ ಸಂಭವಿಸಲಿದೆ ಎಂದು ಖಗೋಳಶಾಸ್ತ್ರಜ್ಞರು ಹೇಳಿದ್ದಾರೆ. ಭೂಮಿ ಮತ್ತು ಚಂದ್ರನ ನಡುವಿನ ಅಂತರವು ಕಡಿಮೆಯಿದ್ದರೆ, ಚಂದ್ರಗ್ರಹಣದ ಅವಧಿಯೂ ಕಡಿಮೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...