ಈ ವರ್ಷದ ಮೊದಲ ಚಂದ್ರಗ್ರಹಣ ಮೇ 5 ರಂದು ಗೋಚರಿಸಲಿದೆ. ಶುಕ್ರವಾರ ಸಂಭವಿಸುವುದು ಪೆನಂಬ್ರಾಲ್ ಚಂದ್ರ ಗ್ರಹಣವಾಗಿದ್ದು ಮಾರ್ಚ್ 5 ರಂದು ರಾತ್ರಿ 8.45 ರಿಂದ ಆರಂಭವಾಗಿ ಮೇ 6 ರ ಮುಂಜಾನೆ 1.02 ಕ್ಕೆ ಗ್ರಹಣ ಕೊನೆಗೊಳ್ಳುತ್ತದೆ. ಒಟ್ಟು 4 ಗಂಟೆ 18 ನಿಮಿಷಗಳವರೆಗೆ ಗ್ರಹಣ ಗೋಚರಿಸಲಿದೆ.
ಅಂಟಾರ್ಟಿಕಾ, ಏಷ್ಯಾ, ರಷ್ಯಾ, ಆಫ್ರಿಕಾ ಸೇರಿದಂತೆ ಪ್ರಪಂಚದ ಹೆಚ್ಚಿನ ಭಾಗಗಳಿಂದ ಚಂದ್ರಗ್ರಹಣ ಗೋಚರಿಸುತ್ತದೆ. ಈ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.
ಭೂಮಿ, ಸೂರ್ಯ ಮತ್ತು ಚಂದ್ರನ ನಡುವೆ ಹಾದುಹೋಗುವ ಘಟನೆಯೇ ಚಂದ್ರಗ್ರಹಣ. ಗ್ರಹಣದ ಸಮಯದಲ್ಲಿ ಸೂರ್ಯ , ಭೂಮಿ ಮತ್ತು ಚಂದ್ರ ಯಾವ ರೇಖೆಯಲ್ಲಿ ಇರುತ್ತಾರೆ ಎಂಬುದರ ಆಧಾರದ ಮೇಲೆ ಮೂರು ವಿಧದ ಚಂದ್ರಗ್ರಹಣಗಳಿವೆ .
ಮೇ 5 ರಂದು ಪೆನಂಬ್ರಾಲ್ ಚಂದ್ರಗ್ರಹಣವಾಗಿರುತ್ತದೆ. ಈ ಹಂತದಲ್ಲಿ ಚಂದ್ರನು ಭೂಮಿಯ ಪೆನಂಬ್ರಾ ಅಥವಾ ಅದರ ನೆರಳಿನ ಮಸುಕಾದ ಹೊರಭಾಗದ ಮೂಲಕ ಚಲಿಸುತ್ತದೆ, ಇದು ವೀಕ್ಷಿಸಲು ತುಂಬಾ ಕಷ್ಟಕರವಾಗಿರುತ್ತದೆ. ಮುಂದಿನ ಚಂದ್ರ ಗ್ರಹಣವು ಅಕ್ಟೋಬರ್ 28, 2023 ರಂದು ಸಂಭವಿಸುತ್ತದೆ