alex Certify ಪ್ರತಿದಿನ 2000 ಕ್ಕೂ ಅಧಿಕ ಮಂದಿಗೆ ಉಚಿತ ಊಟ ನೀಡುತ್ತಿದ್ದ ʼಲಂಗರ್​ ಬಾಬಾʼ ಇನ್ನಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ 2000 ಕ್ಕೂ ಅಧಿಕ ಮಂದಿಗೆ ಉಚಿತ ಊಟ ನೀಡುತ್ತಿದ್ದ ʼಲಂಗರ್​ ಬಾಬಾʼ ಇನ್ನಿಲ್ಲ

ಚಂಡೀಗಢದ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಸ್ನಾತಕೋತ್ತರ ಸಂಸ್ಥೆಯ ಹೊರಗೆ ತಮ್ಮ ಸ್ವಂತ ಹಣದಿಂದ ಪ್ರತಿದಿನ ಹಸಿದವರಿಗೆ ಉಚಿತ ತಾಜಾ ಸಸ್ಯಹಾರಿ ಊಟವನ್ನು ಉಣಬಡಿಸುತ್ತಿದ್ದ ಕೋಟ್ಯಾಧಿಪತಿ ಸೋಮವಾರ ತಮ್ಮ 86ನೇ ವಯಸ್ಸಿಗೆ ನಿಧನರಾಗಿದ್ದಾರೆ. ಲಂಗರ್​ ಬಾಬಾ ಎಂದೇ ಫೇಮಸ್​ ಆಗಿದ್ದ ಜಗದೀಶ್​ ಲಾಲ್​ ಅಹುಜಾ ಕ್ಯಾನ್ಸರ್​ ವಿರುದ್ಧ ಹೋರಾಡುತ್ತಿದ್ದರು. 1981ರಿಂದ ಈ ಲಂಗರ್​ ಬಾಬಾ ಉಚಿತ ಆಹಾರವನ್ನು ವಿತರಿಸುತ್ತಿದ್ದರು.

ಸಮಾಜಕ್ಕೆ ಇವರು ನೀಡುತ್ತಿರುವ ಪ್ರಾಮಾಣಿಕ ಸೇವೆಯನ್ನು ಗಮನಿಸಿ ಸರ್ಕಾರವು ಕಳೆದ ವರ್ಷ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. 2001ರಿಂದ ಪಿಜಿಐ ಆಸ್ಪತ್ರೆಗೆ ಎದುರು ಪ್ರತಿದಿನ ಉಚಿತ ಊಟದ ವ್ಯವಸ್ಥೆಯನ್ನು ಕಲ್ಪಿಸಿದ ಕೀರ್ತಿ ಇವರದು. ಬಳಿಕ ಇವರು ಸೆಕ್ಟರ್​ 32ರಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯನ್ನು ಆರಂಭಿಸಿದರು. ಲಂಗರ್​ ಮಧ್ಯಾಹ್ನ ಹಾಗೂ ಸಂಜೆ ಸಮಯದಲ್ಲಿ ಸಾರ್ವಜನಿಕರಿಗೆ ತಾಜಾ ಸಸ್ಯಹಾರಿ ಊಟವನ್ನು ಕಲ್ಪಿಸುತ್ತದೆ.

ಜಗದೀಶ್​ ಲಾಲ್​ ಅಹುಜಾ ಪ್ರತಿದಿನ ಏನಿಲ್ಲವೆಂದರೂ ಸರಿಸುಮಾರು 2000 ರಿಂದ 2500 ವ್ಯಕ್ತಿಗಳಿಗೆ ಆಹಾರವನ್ನು ಒದಗಿಸುತ್ತಿದ್ದರು. ಕೆಲವು ವಿಶೇಷ ಸಂದರ್ಭಗಳಲ್ಲಿ ದಿನಕ್ಕೆ 4000ಕ್ಕೂ ಅಧಿಕ ಮಂದಿಗೆ ಊಟ ಬಡಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತೆ.

2015ರಲ್ಲಿ ತಮ್ಮ 1.5 ಕೋಟಿ ರೂಪಾಯಿ ಮೌಲ್ಯದ ತಮ್ಮ ಏಳನೇ ಆಸ್ತಿಯನ್ನು ಮಾರಾಟ ಮಾಡಿದ್ದ ಜಗದೀಶ್​ ಈ ಹಣದಲ್ಲಿ ಉಚಿತವಾಗಿ ಊಟ ಬಡಿಸುವ ವ್ಯವಸ್ಥೆ ಮಾಡುತ್ತಿದ್ದರು.

1947ರಲ್ಲಿ ಭಾರತ ವಿಭಜನೆಯ ಸಂದರ್ಭದಲ್ಲಿ ಪೇಶಾವರ ತೊರೆದು ಭಾರತಕ್ಕೆ ಬಂದು ತಲುಪಿದಾಗ ಅವರಿಗೆ ಕೇವಲ 12 ವರ್ಷ ವಯಸ್ಸು. ಪಟಿಯಾಲ ಹಾಗೂ ಅಮೃತಸರದಲ್ಲಿ ನಿರಾಶ್ರಿತ ಶಿಬಿರಗಳಲ್ಲಿ ತಂಗುವ ಮೂಲಕ ಬಾಲ್ಯವನ್ನು ಕಳೆದ ಅವರು 21ನೇ ವಯಸ್ಸಿನಲ್ಲಿ ಚಂಡೀಗಢಕ್ಕೆ ತೆರಳಿ ಹಣ್ಣಿನ ವ್ಯಾಪಾರ ಆರಂಭಿಸಿದ್ರು.

ಬಳಿಕ ದೊಡ್ಡ ಮಟ್ಟದಲ್ಲಿ ಬಾಳೆಹಣ್ಣಿನ ವ್ಯಾಪಾರ ನಡೆಸಿದ ಇವರನ್ನು ಬಾಳೆ ಹಣ್ಣುಗಳ ರಾಜ ಅಂತಲೇ ಕರೆಯಲಾಗುತ್ತಿತ್ತು. ಬಡವರಿಗೆ ಉಚಿತವಾಗಿ ಊಟದ ಸೇವೆ ನೀಡುವ ಬಗ್ಗೆ ಈ ಹಿಂದೆ ಮಾತನಾಡಿದ್ದ ಜಗದೀಶ್​, ನನ್ನ ಪುತ್ರನ ಎಂಟನೇ ವರ್ಷದ ಹುಟ್ಟುಹಬ್ಬದಂದು ಮಕ್ಕಳಿಗೆ ಉಚಿತ ಊಟ ನೀಡುವ ಮೂಲಕ ಜನ್ಮದಿನವನ್ನು ಸಂಭ್ರಮಿಸಲು ನಿರ್ಧರಿಸಿದೆ. ಊಟ ಪಡೆದ ಮಕ್ಕಳ ಮೊಗದಲ್ಲಿನ ಸಂತಸ ಕಂಡು ನನಗೆ ನನ್ನ ಬಾಲ್ಯ ನೆನಪಿಗೆ ಬಂತು. ಹೀಗಾಗಿ ಈ ಯೋಜನೆಯನ್ನು ಪ್ರತಿನಿತ್ಯವೂ ಮುಂದುವರಿಸಿದೆ ಎಂದು ಹೇಳಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...