ಸಿಖ್ಖರ ಮೊದಲ ಗುರು, ಗುರು ನಾನಕ್ ದೇವ್ರ 552ನೇ ಜಯಂತಿಯನ್ನು ಜಗತ್ತಿನಾದ್ಯಂತ ಸಿಖ್ ಸಮುದಾಯ ಆಚರಿಸುತ್ತಿದೆ. ಇದೇ ಸುಸಂದರ್ಭದಲ್ಲಿ, ಸಿಖ್ ಧರ್ಮ ಸ್ಥಾಪಕರಿಗೆ ಜನರು ವಿವಿಧ ರೂಪಗಳಲ್ಲಿ ನಮನ ಸಲ್ಲಿಸುತ್ತಿದ್ದಾರೆ.
ಚಂಡೀಘಡ ಮೂಲಕ ಹೂಡಿಕೆದಾರ ಹರ್ನೀತ್ ಸಿಂಗ್ ಖರ್ಬಂದಾ ಇವರಲ್ಲಿ ಒಬ್ಬರು. ಗುರು ನಾನಕರಿಗೆ ತಮ್ಮದೇ ಶೈಲಿಯಲ್ಲಿ ನಮನ ಸಲ್ಲಿಸಲು ಮುಂದಾದ ಹರ್ನೀತ್ ಸಿಂಗ್, ಚಂಡೀಘಡ ನಗರದ ರಸ್ತೆಗಳಲ್ಲಿ ಸೈಕಲ್ ತುಳಿಯುತ್ತಾ ’ಇಕ್ ಓಂಕಾರ್’ ವಿನ್ಯಾಸದ ನಕ್ಷೆ ಬರುವಂತೆ ಸುತ್ತು ಹೊಡೆದಿದ್ದಾರೆ.
ವಿಮಾನ ಪ್ರಯಾಣಿಕರಿಗೆ ಖುಷಿ ಸುದ್ದಿ..! ನಿಮ್ಮ ನಗರದಿಂದಲೂ ವಿದೇಶಕ್ಕೆ ಹಾರಲಿದೆ ವಿಮಾನ
’ಇಕ್ ಓಂಕಾರ್’ ಎಂಬ ಮಂತ್ರದ ಅರ್ಥ — ಜಗತ್ತಿನಲ್ಲಿ ಇರುವುದು ಒಬ್ಬನೇ ದೇವರು ಅಥವಾ ಒಬ್ಬನೇ ಸೃಷ್ಟಿಕರ್ತ.
ಮ್ಯಾಪ್ಸ್ ಅಪ್ಲಿಕೇಶನ್ನಲ್ಲಿ ಮೂಡಿದ ನಕಾಶೆ ಚಿತ್ರವನ್ನು ಗುರು ಗ್ರಂಥ್ ಸಾಹೀಬ್ನ ಮೊದಲ ಶಬ್ದಗಳನ್ನು ಕ್ಯಾಪ್ಷನ್ ಕೊಟ್ಟು ಆನ್ಲೈನ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ ಹರ್ನೀತ್ ಸಿಂಗ್. ಈ ಮೂಲಕ ಎಲ್ಲರಿಗೂ ವಿಶೇಷಾಗಿ ಗುರು ಪೂರ್ಣಿಮೆಯ ಶುಭಾಶಯ ಕೋರಿದ್ದಾರೆ ಸಿಂಗ್.