ಗುರುನಾನಕ್ ಜಯಂತಿ ಸಿಖ್ರ ಪಾಲಿಗೆ ವಿಶೇಷ ದಿನ. ಈ ದಿನದ ಪ್ರಯುಕ್ತ ಸಿಖ್ರು ವಿಶೇಷ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿರುತ್ತಾರೆ. ಗುರುನಾನಕ್ ಅವರು ರಾಯ್ ಭೋಯ್ ಕಿ ತಲ್ವಂಡಿ ಎಂಬ ಹಳ್ಳಿಯಲ್ಲಿ ಜನಿಸಿದ್ದರು. ಈ ಹಳ್ಳಿಗೆ ಈಗ ನಾನಕಾ ಸಾಹಿಬ್ ಎಂದು ಹೇಳಲಾಗುತ್ತೆ. ಸದ್ಯಕ್ಕೆ ಲಾಹೋರ್ ಗಡಿಭಾಗವಾಗಿರುವ ಈ ಗ್ರಾಮದಲ್ಲಿ ಗುರುನಾನಕ್ ಅವರ ಜನ್ಮ ದಿನವನ್ನ ಅದ್ಧೂರಿಯಾಗಿ ಆಚರಿಸಲಾಯಿತು.
ಇದೇ ದಿನದ ಪ್ರಯುಕ್ತ ಚಂಡೀಗಢನ ಗುರುದ್ವಾರದಲ್ಲಿ 553 ಕೆ.ಜಿ ತೂಕದ ಕೇಕ್ನ್ನ ಕತ್ತರಿಸಲಾಯಿತು. ಈ ವಿಶಾಲಾಕಾರದ ಕೇಕ್ ವಿಡಿಯೋ ಇನ್ಸ್ಟಾಗ್ರಾಮ್ ಅನ್ನೊ ಪೇಜ್ನಲ್ಲಿ ‘1000 ಥಿಂಗ್ಸ್ ಇನ್ ಲುಧಿಯಾನಾ’ ಪೋಸ್ಟ್ ಮಾಡಲಾಗಿದೆ.
ಗುಲಾಬಿ ಬಣ್ಣದ ಈ ಕೇಕ್, ಚೆರ್ರಿ ಹಣ್ಣುಗಳಿಂದ ಸಿಂಗಾರ ಮಾಡಿರುವುದನ್ನ ನೋಡಬಹುದು. ಐಸಿಂಗ್ನಿಂದ ಸಿಂಗಾರ ಮಾಡಿರುವ ಈ ಕೇಕ್ ಎಲ್ಲರ ಗಮನ ಸೆಳೆಯುವಂತಿದೆ. ಈ ವಿಶಾಲರೂಪದ ಕೇಕ್ನ್ನ ಅನೇಕ ಟೇಬಲ್ಗಳನ್ನ ಇಟ್ಟು ಜೋಡಿಸಿ ಪ್ರದರ್ಶನಕ್ಕೆ ಇಡಲಾಗಿತ್ತು. ಇದೇ ಕೇಕ್ನ್ನ ಗುರುನಾನಕ್ ಅವರ ಜನ್ಮದಿನದಂದೇ ಜನರಿಗೆ ಲಂಗರ್ ರೂಪದಲ್ಲಿ ಹಂಚಲಾಯಿತು.
ಒಂದು ಮಾಹಿತಿ ಪ್ರಕಾರ ದೇಶದ ಮೂಲೆ ಮೂಲೆಯಲ್ಲಿರುವ ಗುರುದ್ವಾರದಲ್ಲಿ ಗುರುನಾನಕ್ ಜಯಂತಿಯನ್ನ ಆಚರಿಸಲಾಗುತ್ತೆ. ಅದರಲ್ಲೂ ಪಾಕಿಸ್ತಾನ್ ಗಡಿಭಾಗದಲ್ಲಿರುವ ನಾನಕಾ ಸಾಹಿಬ್ ಗ್ರಾಮಕ್ಕೆ ಭಾರತೀಯ ಸಿಖ್ ಯಾತ್ರಾರ್ಥಿಗಳು ವರ್ಷದಿಂದ ವರ್ಷಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಈ ಬಾರಿ 2,420 ಕ್ಕೂ ಹೆಚ್ಚು ಸಿಖ್ ಭಕ್ತರು ಪ್ರಯಾಣಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಒಟ್ಟಿನಲ್ಲಿ ಜಗತ್ತಿನ ಮೂಲೆ ಮೂಲೆಯಲ್ಲಿರುವ ಸಿಖ್ ಸಮುದಾಯದವರು ಈ ಗುರುನಾನಕ್ ಜಯಂತಿಯನ್ನ ಆಚರಿಸುತ್ತಿದ್ದಾರೆ.