
ಶನಿವಾರ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ವೇಳೆ ಹಲವು ಕ್ರಿಕೆಟ್ ಅಭಿಮಾನಿಗಳು ಹೈವೋಲ್ಟೇಜ್ ಪಂದ್ಯ ವೀಕ್ಷಣೆಗೆ ಕಾತರರಾಗಿದ್ದರು. ಪಂದ್ಯದಲ್ಲಿ ಭಾರತ ಗೆಲ್ಲಬೇಕೆಂದು ದೇಶಾದ್ಯಂತ ಪೂಜೆ, ಪ್ರಾರ್ಥನೆಗಳು ಜರುಗಿದ್ವು. ಕೆಲವು ಅಭಿಮಾನಿಗಳು ಈ ಪಂದ್ಯಾವಳಿಯನ್ನು ಆಚರಿಸಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದರು .
ಆದರೆ ಭಾರತ- ಪಾಕಿಸ್ತಾನ ನಡುವಿನ ಮ್ಯಾಚ್ ನಿರೀಕ್ಷಿಸಿದಷ್ಟು ಜೋಶ್ ತರಲಿಲ್ಲ. ಪಾಕಿಸ್ತಾನ ತಂಡ ಬ್ಯಾಟಿಂಗ್ ಮುಗಿಸುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳಿಗೆ ಗೆಲ್ಲುವುದು ಭಾರತ ತಂಡವೇ ಎಂದು ದೃಢವಾಗಿತ್ತು. ಆದರೆ ಪಂದ್ಯದ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಹಲವು ಅಭಿಮಾನಿಗಳು ಆಟದ ಸಮಯದಲ್ಲಿ ಆನಂದಿಸಲು ಆನ್ ಲೈನ್ ಫುಡ್ ಡೆಲಿವರಿ ವೇದಿಕೆಗಳಲ್ಲಿ ಆಹಾರವನ್ನು ಆರ್ಡರ್ ಮಾಡಿದ್ದರು.
“ಚಂಡೀಗಢದ ಕುಟುಂಬವೊಂದು ಒಂದೇ ಬಾರಿಗೆ 70 ಬಿರಿಯಾನಿಗಳನ್ನು ಆರ್ಡರ್ ಮಾಡಿದೆ” ಎಂದು ಆನ್‌ಲೈನ್ ಆಹಾರ ವಿತರಣಾ ವೇದಿಕೆ ಸ್ವಿಗ್ಗಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಈ ಪೋಸ್ಟ್ ವೈರಲ್ ಆಗಿದೆ. ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆಂದು ಅವರಿಗೆ ತಿಳಿದಿತ್ತು ಎಂದು ತೋರುತ್ತಿದೆ ಎಂದು ಸ್ವಿಗ್ಗಿ ಪೋಸ್ಟ್ ನಲ್ಲಿ ವ್ಯಂಗ್ಯವಾಡಿದೆ. ಈ ಪೋಸ್ಟ್ ವೈರಲ್ ಆಗಿದ್ದು ಹಲವರು ವ್ಯಂಗ್ಯ ಮಾಡುತ್ತಾ ಪ್ರತಿಕ್ರಿಯಿಸಿದ್ದಾರೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಏಕದಿನ ಅಂತರಾಷ್ಟ್ರೀಯ (ODI) ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 7 ವಿಕೆಟ್ ಗಳಿಂದ ಜಯ ಸಾಧಿಸಿತು.
