alex Certify PUBG ಗೇಮ್ ನಲ್ಲಿ 17 ಲಕ್ಷ ರೂ. ಕಳೆದುಕೊಂಡು ಮನೆಯಿಂದ್ಲೇ ಹಣ ಕದ್ದ ಡ್ರಗ್ ಡೀಲರ್ ಪುತ್ರ: ದೂರು ನೀಡಿದ ತಂದೆಗೆ ಕಾದಿತ್ತು ಬಿಗ್ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

PUBG ಗೇಮ್ ನಲ್ಲಿ 17 ಲಕ್ಷ ರೂ. ಕಳೆದುಕೊಂಡು ಮನೆಯಿಂದ್ಲೇ ಹಣ ಕದ್ದ ಡ್ರಗ್ ಡೀಲರ್ ಪುತ್ರ: ದೂರು ನೀಡಿದ ತಂದೆಗೆ ಕಾದಿತ್ತು ಬಿಗ್ ಶಾಕ್

ಚಂಡೀಗಢದ ಪೀಪ್ಲಿ ವಾಲಾ ಟೌನ್‌ನ ನಿವಾಸಿ ಡ್ರಗ್ ಡೀಲರ್‌ ನ ಅಪ್ರಾಪ್ತ ಮಗ PUBG, ಫ್ರೀ ಫೈರ್ ಮತ್ತು ಕಾರ್ ರೇಸಿಂಗ್ ಗೇಮ್‌ ಗಳಲ್ಲಿ 17 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ.

ಆತ ಈ ಮೊತ್ತವನ್ನು ತನ್ನ ಮನೆಯಿಂದಲೇ ಕದ್ದಿದ್ದಾನೆ. ಇದನ್ನು ಅರಿಯದ ತಂದೆ ಕೆಲ ದಿನಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿಯಲ್ಲದೆ ಆತನ ಸೋದರ ಸಂಬಂಧಿ ಹಾಗೂ ಸ್ನೇಹಿತನೂ ಬಂಧಿತರಾಗಿದ್ದಾರೆ.

3 ಐಫೋನ್‌, ಬಟ್ಟೆ ಖರೀದಿ ವಿಮಾನದಲ್ಲಿ ಪ್ರಯಾಣಿಸಿದ್ರು

ಉದ್ಯಮಿಯ ಮಗ ಹಣ ಕದ್ದು ಸ್ನೇಹಿತರೊಂದಿಗೆ ಸೇರಿ ಮೂರು ಐಫೋನ್, ಬಟ್ಟೆ, ಶೂ ಖರೀದಿಸಿದ್ದಾನೆ. ಅಷ್ಟೇ ಅಲ್ಲ, ವಿಮಾನದಲ್ಲಿಯೂ ಪ್ರಯಾಣಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ಒಬ್ಬನನ್ನು 27 ವರ್ಷದ ಸೂರಜ್ ಎಂದು ಗುರುತಿಸಲಾಗಿದೆ. ಮೂವರು ಅಪ್ರಾಪ್ತ ಆರೋಪಿಗಳನ್ನು ಬಾಲಕರ ಸುಧಾರಣಾ ಗೃಹಕ್ಕೆ ಕಳುಹಿಸಲಾಗಿದೆ. ಪೊಲೀಸರು ಭಾನುವಾರ ಡ್ಯೂಟಿ ಮ್ಯಾಜಿಸ್ಟ್ರೇಟ್ ಮುಂದೆ ಸೂರಜ್‌ ನನ್ನು ಹಾಜರುಪಡಿಸುವ ಮೂಲಕ ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಪೊಲೀಸರು 10.22 ಲಕ್ಷ ರೂ. ಮೌಲ್ಯದ 3 ಐಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಸೂರಜ್ 12 ನೇ ತರಗತಿ ತೇರ್ಗಡೆಯಾಗಿದ್ದು, ಖಾಸಗಿ ಡಾಟಾ ಎಂಟ್ರಿ ಆಪರೇಟರ್ ಆಗಿದ್ದಾನೆ. ಆತ ಅಪ್ರಾಪ್ತ ಯುವಕರನ್ನು ಆನ್‌ ಲೈನ್ ಗೇಮ್‌ಗಳನ್ನು ಖರೀದಿಸುವಂತೆ ಪ್ರೇರೇಪಿಸುತ್ತಾನೆ ಎಂದು ಆರೋಪಿಸಲಾಗಿದೆ.

ಪ್ರಕರಣ ಬಯಲಿಗೆಳೆದ ಪೊಲೀಸರು

ಜನವರಿ 12 ರಂದು ಡ್ರಗ್ ಡೀಲರ್ ಹುಕುಂ ಚಂದ್ ಕಳ್ಳತನ ಪ್ರಕರಣ ದಾಖಲಿಸಿದ್ದರು. ಪ್ರಕರಣ ಬಯಲಾದ ನಂತರ, ಆರೋಪಿಗಳ ವಿರುದ್ಧ ಐಪಿಸಿಯ ಸೆಕ್ಷನ್ 420(ವಂಚನೆ) ಮತ್ತು 120 ಬಿ(ಪಿತೂರಿ) ಸಹ ಸೇರಿಸಲಾಗಿದೆ.

ಮನೆಯೊಳಗಿನ ಹಾಸಿಗೆಯಲ್ಲಿ 19 ಲಕ್ಷ ರೂ. ಗಳನ್ನು ಇಡಲಾಗಿತ್ತು ಎಂದು ದೂರುದಾರರು ಪೊಲೀಸರಿಗೆ ತಿಳಿಸಿದ್ದು,  ಅದರಲ್ಲಿ 17 ಲಕ್ಷ ರೂ. ಕಳುವಾಗಿತ್ತು ಎಂದು ಮಾಹಿತಿ ನೀಡಿದ್ದರು. ಎಸ್‌ಎಸ್‌ಪಿ ಕುಲದೀಪ್ ಚಹಾಲ್ ಅವರ ಸೂಚನೆಯಂತೆ, ಡಿಎಸ್‌ಪಿ ಎಸ್‌ಪಿಎಸ್ ಸೋಂಧಿ ಅವರ ಮೇಲ್ವಿಚಾರಣೆಯಲ್ಲಿ, ಎಸ್‌ಹೆಚ್‌ಒ ನೀರಜ್ ಸರ್ನಾ ಅವರನ್ನೊಳಗೊಂಡ ತಂಡ ಪ್ರಕರಣ ಭೇದಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...