alex Certify BIG NEWS: ವಿದ್ಯಾರ್ಥಿಯ ಶುಲ್ಕ ಮರುಪಾವತಿಸಲು ವಿಫಲ; ಬಡ್ಡಿ ಸಮೇತ ನೀಡಲು ಕೋಚಿಂಗ್ ಸೆಂಟರ್ ಗೆ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿದ್ಯಾರ್ಥಿಯ ಶುಲ್ಕ ಮರುಪಾವತಿಸಲು ವಿಫಲ; ಬಡ್ಡಿ ಸಮೇತ ನೀಡಲು ಕೋಚಿಂಗ್ ಸೆಂಟರ್ ಗೆ ಆದೇಶ

ಕೋಚಿಂಗ್ ಸೆಂಟರ್ ಗೆ ದಾಖಲಾದ ಕೆಲವೇ ದಿನಗಳಲ್ಲಿ ಕೋಚಿಂಗ್ ನಿಲ್ಲಿಸಿದ ವಿದ್ಯಾರ್ಥಿಗೆ ಶುಲ್ಕ ಮರುಪಾವತಿಸದ ಚಂಡೀಗಡದ ಕೋಚಿಂಗ್ ಸೆಂಟರ್ ವೊಂದಕ್ಕೆ ದಂಡ ವಿಧಿಸಲಾಗಿದೆ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಸೆಕ್ಟರ್ 35 ಕೋಚಿಂಗ್ ಇನ್ಸ್ಟಿಟ್ಯೂಟ್ ಗೆ ದಂಡ ವಿಧಿಸಿದೆ.

ದೂರುದಾರರಾದ ಮೊಹಾಲಿಯ ವಿನಯ್ ಕುಮಾರ್ ಅತ್ತಾರ್ ಅವರು M/s ಇಂದಿರಾಗಾಂಧಿ ಏರೋನಾಟಿಕ್ಸ್ ಇನ್ಸ್ಟಿಟ್ಯೂಟ್, ಸೆಕ್ಟರ್ 35-C ಚಂಡೀಗಢ ಮತ್ತು ನವದೆಹಲಿಯಲ್ಲಿರುವ ಅದರ ಕಚೇರಿಯ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದರು.

ವಿನಯ್ ಕುಮಾರ್ ಜುಲೈ 2022 ರಲ್ಲಿ ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಕೋರ್ಸ್‌ನಲ್ಲಿ ತರಬೇತಿಗಾಗಿ ಇನ್ಸ್ಟಿಟ್ಯೂಟ್ ಅನ್ನು ಸಂಪರ್ಕಿಸಿದ್ದರು. ಕೋರ್ಸ್ ಗಾಗಿ 2022 ರ ಜುಲೈನಲ್ಲಿ 1.9 ಲಕ್ಷ ರೂ. ಕೋರ್ಸ್ ಶುಲ್ಕವನ್ನು ಚೆಕ್ ಮೂಲಕ ಮತ್ತು 5,000 ರೂ. ನಗದನ್ನು ಪಾವತಿಸಿದರು. ತಾಂತ್ರಿಕ ಸಮಸ್ಯೆ ಕಾರಣದಿಂದ ಚೆಕ್ ಅನ್ನು ಎನ್‌ಕ್ಯಾಶ್ ಮಾಡಲು ಸಾಧ್ಯವಾಗಲಿಲ್ಲ. ಬಳಿಕ ಅದೇ ತಿಂಗಳು NEFT ಮೂಲಕ ಮೊತ್ತವನ್ನು ಪಾವತಿಸಿದ್ದರು.

ಜುಲೈ 6, 2022 ರಂದು ವಿಷಯದ ಕೋರ್ಸ್ ಅನ್ನು ಪ್ರಾರಂಭಿಸಬೇಕಾಗಿದ್ದರೂ ಪರಿಣಿತ ವಿಷಯ ಶಿಕ್ಷಕರು ಕೋರ್ಸ್‌ಗೆ ತರಬೇತಿ ನೀಡಲು ಬರಲಿಲ್ಲ. ಅವರ ಬದಲಾಗಿ ಬೇರೊಬ್ಬ ಶಿಕ್ಷಕರು ತರಗತಿಗೆ ತೆಗೆದುಕೊಂಡಿದ್ದರು. ಈ ವೇಳೆ ವಿನಯ್ ಕುಮಾರ್ ಜುಲೈ 12 ರಿಂದ ಆಗಸ್ಟ್ 10 ರವರೆಗೆ ತರಗತಿಗಳಿಗೆ ಹಾಜರಾಗಿದ್ದರು. ಆದರೆ ಬದಲಿ ಶಿಕ್ಷಕರು ಕೋರ್ಸ್ ಬಗ್ಗೆ ಪರಿಣತಿಯನ್ನು ಹೊಂದಿಲ್ಲ ಎಂದು ಕಂಡುಕೊಂಡ ವಿನಯ್ ಕುಮಾರ್ ಕೋರ್ಸ್ ಅನ್ನು ನಿಲ್ಲಿಸಿ ಶುಲ್ಕವನ್ನು ಮರುಪಾವತಿಸಲು ಕೋರಿದರು.

ಈ ಪ್ರಕರಣದಲ್ಲಿ ವಿನಯ್ ಕುಮಾರ್ ಕಾನೂನು ಮೂಲಕ ಹಣ ಪಡೆಯಲು ಮುಂದಾದಾಗ ಸಂಸ್ಥೆಯು ಆರೋಪಕ್ಕೆ ಉತ್ತರ ಮತ್ತು ಸಾಕ್ಷ್ಯ ನೀಡಲು ಸಮಯಾವಕಾಶ ಕೇಳಿತು. ಅದಾಗ್ಯೂ ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ಹಾಜರಾಗಲು ವಿಫಲರಾದಾಗ ಆಯೋಗವು ವಿನಯ್ ಕುಮಾರ್ ತರಗತಿಗೆ ಹಾಜರಾದ ದಿನದ ಶುಲ್ಕ ಹೊರತುಪಡಿಸಿ ಉಳಿದ ಶುಲ್ಕ ಬಡ್ಡಿ ಸಹಿತ ನೀಡುವಂತೆ ಸೂಚಿಸಿದೆ.

“ಇಲ್ಲಿಯವರೆಗೆ ದೂರುದಾರರಿಗೆ ನೀಡಬೇಕಾದ ಮರುಪಾವತಿ ಮತ್ತು ಪರಿಹಾರದ ಪ್ರಮಾಣಕ್ಕೆ ಸಂಬಂಧಿಸಿದಂತೆ ಅವರು ಸುಮಾರು 45 ದಿನಗಳವರೆಗೆ ವಿಷಯದ ಕೋರ್ಸ್ ಅನ್ನು ಮುಂದುವರೆಸಿದ್ದಾರೆಂದು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಅವರು ಕೋರ್ಸ್ ಅವಧಿಯ ಅನುಪಾತದ ಮೊತ್ತವನ್ನು ಕಡಿತಗೊಳಿಸಿದ ನಂತರ ಮೊತ್ತವನ್ನು ಮರುಪಾವತಿಸಲು ಅರ್ಹರಾಗಿರುತ್ತಾರೆ. ಅವರು ಹಾಜರಾದ ಕೋಚಿಂಗ್ ಅಂದರೆ 1,95,000 ರೂ. –24,375 ರೂ. = 1,70,625 ರೂ. ಜೊತೆಗೆ ಅವರು ಅನುಭವಿಸಿದ ಕಿರುಕುಳಕ್ಕಾಗಿ ಬಡ್ಡಿ ಮತ್ತು ಇತರೆ ಪರಿಹಾರ ಹಣ ನೀಡಬೇಕೆಂದು ಆಯೋಗ ಹೇಳಿದೆ.

ಈ ಗ್ರಾಹಕ ದೂರನ್ನು ಸಲ್ಲಿಸಿದ ದಿನಾಂಕದಿಂದ ಪಾವತಿಯ ದಿನಾಂಕದವರೆಗೆ ವಾರ್ಷಿಕವಾಗಿ 9% ಬಡ್ಡಿಯೊಂದಿಗೆ ದೂರುದಾರರಿಗೆ 1,70,625 ರೂ. ಮರುಪಾವತಿ ಮಾಡಲು ಆಯೋಗವು ಸಂಸ್ಥೆಗೆ ನಿರ್ದೇಶನ ನೀಡಿದೆ. ಮತ್ತು ಗ್ರಾಹಕರಿಗೆ ಮಾನಸಿಕ ಯಾತನೆ ಮತ್ತು ಕಿರುಕುಳ ನೀಡಿದ್ದಕ್ಕಾಗಿ 5,000 ರೂ. ಪರಿಹಾರ ನೀಡುವಂತೆ ಹಾಗೂ ವ್ಯಾಜ್ಯ ವೆಚ್ಚವಾಗಿ 5,000 ರೂ. ನೀಡುವಂತೆಯೂ ಸೂಚಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...