ಚಂಡೀಗಢ: ನೈಟ್ ಕರ್ಫ್ಯೂ ಲಾಭ ಪಡೆದ ಆಟೋರಿಕ್ಷಾ ಚಾಲಕನೊಬ್ಬ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ 35 ವರ್ಷದ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಚಂಡೀಗಢದಿಂದ ವರದಿಯಾಗಿದೆ.
ಭಾನುವಾರ ತಡರಾತ್ರಿ ಚಂಡೀಗಢದ ಸೆಕ್ಟರ್ 17ರ ಜನರಲ್ ಪೋಸ್ಟ್ ಆಫೀಸ್ ಬಳಿ ಈ ಘಟನೆ ನಡೆದಿದೆ. ನಂತರ ಮೂವರು ಗೃಹರಕ್ಷಕರು ಮಹಿಳೆಯನ್ನು ರಕ್ಷಿಸಿದ್ದಾರೆ.
ಆರೋಪಿಯನ್ನು ದಾರುವಾ ಗ್ರಾಮದ ನಿವಾಸಿ 27 ವರ್ಷದ ಜೈ ದೇವ್ ಎಂದು ಗುರುತಿಸಲಾಗಿದೆ. ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಸಂತ್ರಸ್ತ ಮಹಿಳೆ ಸೆಕ್ಟರ್ 17 ಬಸ್ ನಿಲ್ದಾಣಕ್ಕೆ ಆಟೋರಿಕ್ಷಾವನ್ನು ಬಾಡಿಗೆಗೆ ಪಡೆದಿದ್ದಳು, ಅಲ್ಲಿಂದ ದೆಹಲಿಗೆ ಬಸ್ ತೆಗೆದುಕೊಳ್ಳಲು ಯೋಜಿಸಿದ್ದಳು.
ಮಹಿಳೆ ಮೌಲಿ ಜಾಗರಣದಲ್ಲಿ ತನ್ನ ಸ್ನೇಹಿತನನ್ನು ಭೇಟಿಯಾಗಲು ನಗರಕ್ಕೆ ಭೇಟಿ ನೀಡಿದ್ದಾಳೆ. ಆದರೆ, ಆಕೆಯ ಸ್ನೇಹಿತೆ ಮನೆಯಲ್ಲಿ ಇರಲಿಲ್ಲ. ಸಂಪರ್ಕ ಸಂಖ್ಯೆಯೂ ಇರಲಿಲ್ಲ. ಆ ಸಮಯದಲ್ಲಿ ಯಾವುದೇ ರೈಲು ಲಭ್ಯವಿಲ್ಲದ ಕಾರಣ ರಾತ್ರಿ 10 ಗಂಟೆಗೆ ಆಟೋವನ್ನು ಸೆಕ್ಟರ್ 17 ಬಸ್ ನಿಲ್ದಾಣಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದಳು. ಆಟೋ ರಿಕ್ಷಾ ಸೆಕ್ಟರ್ 17 ತಲುಪುತ್ತಿದ್ದಂತೆ, ಚಾಲಕ ಸ್ಲಿಪ್ ರೋಡ್ ತೆಗೆದುಕೊಂಡು ಪೋಸ್ಟ್ ಆಫೀಸ್ ಬಳಿ ಆಟೋದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ದೂರುದಾರರ ಪ್ರಕಾರ, ಆರೋಪಿ ಆಟೋಡ್ರೈವರ್ ತನ್ನನ್ನು ಮೊದಲು ಅನುಚಿತವಾಗಿ ಸ್ಪರ್ಶಿಸಿದ ಮತ್ತು ನಂತರ ಆಕೆಯು ವಿರೋಧಿಸಿದಾಗ ಆಕೆಯ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ.
ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ, ಸೆಂಟ್ರಲ್) ಚರಂಜಿತ್ ಸಿಂಗ್ ಅವರು ಮಹಿಳೆಯ ಕೂಗು ಕೇಳಿದ ನಂತರ ಮೂವರು ಗೃಹ ರಕ್ಷಕರು ಮಹಿಳೆಯನ್ನು ರಕ್ಷಿಸಿದ್ದಾರೆ. ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ದೂರುದಾರರಿಗೆ ಆಟೋರಿಕ್ಷಾದ ಸಂಖ್ಯೆ ನೆನಪಿಲ್ಲ. ಆದರೆ, ಆರೋಪಿಯ ದೈಹಿಕ ರೂಪದ ಬಗ್ಗೆ ಕೆಲವು ವಿವರಗಳನ್ನು ಹಂಚಿಕೊಂಡಿದ್ದಾರೆ. ಬಳಿಕ ಅತ್ಯಾಚಾರ ಸಂತ್ರಸ್ತೆ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ವಾಹನವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದೇ ವೇಳೆ ಮೂವರು ಗೃಹ ರಕ್ಷಕರ ಹೆಸರನ್ನು ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ ಎಂದು ಡಿಎಸ್ಪಿ ಚರಂಜಿತ್ ತಿಳಿಸಿದ್ದಾರೆ.