ಚಂಡೀಗಢ: ಹೆಸರಾಂತ ಏರ್ ಲೈನ್ ನಲ್ಲಿ ಹಿರಿಯ ವ್ಯವಸ್ಥಾಪಕ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಅನುಚಿತ ವಿಡಿಯೋ ಕ್ಲಿಪ್ ಬಳಸಿ ಬ್ಲಾಕ್‌ಮೇಲ್ ಮಾಡಿದ ಮಹಿಳೆಯಿಂದ ಸುಲಿಗೆಗೆ ಒಳಗಾಗಿ ದೂರು ದಾಖಲಿಸಿದ್ದಾರೆ.
ಚಂಡೀಗಢದ ನಿವಾಸಿಯಾಗಿರುವ ದೂರುದಾರ, ಅಪರಿಚಿತ ಮಹಿಳೆಯೊಬ್ಬರು ತನಗೆ ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಳು. ಅವರು ಸ್ನೇಹಿತರ ವಿನಂತಿ ಸ್ವೀಕರಿಸಿದರು. ಸಂವಹನ ನಡೆಸಿದ ನಂತರ ಅವರ ಅಧಿಕೃತ ಸಂಪರ್ಕ ಸಂಖ್ಯೆ ಸಹ ನೀಡಿದ್ದಾರೆ.
ಮಹಿಳೆ ತನ್ನ ಅನುಚಿತ ವೀಡಿಯೊ ಮಾಡಿದ್ದಾಳೆ. ನಂತರ ಅದನ್ನು ಬ್ಲ್ಯಾಕ್‌ಮೇಲ್ ಮಾಡಲು ಬಳಸಿದ್ದಾಳೆ ಎಂದು ಏರ್ ಲೈನ್ ಅಧಿಕಾರಿ ಹೇಳಿದ್ದಾರೆ. ವಿಡಿಯೋ ಕ್ಲಿಪ್ ಡಿಲೀಟ್ ಮಾಡಲು ಬ್ಯಾಂಕ್ ಖಾತೆಗೆ ಎರಡು ಬಾರಿ 25 ಸಾವಿರ ರೂ. ಹಾಕಿಸಿಕೊಂಡಿದ್ದಾಳೆ. ಆರೋಪಿತೆ ಬ್ಯಾಂಕ್ ಖಾತೆಯ ವಿವರ ನೀಡಿ ಹಣ ಪಡೆದುಕೊಂಡು ವಿಡಿಯೋ ಡಿಲಿಟ್ ಮಾಡಿರುವುದಾಗಿ ಹೇಳಿದ್ದಳು. ಆದರೆ, ಹೆಚ್ಚಿನ ಹಣಕ್ಕಾಗಿ ಮತ್ತೆ ಬೇಡಿಕೆ ಇಟ್ಟಿದ್ದಳು. ಆಕೆಯ ವಿರುದ್ಧ ದೂರು ನೀಡಲಾಗಿದೆ.
ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 419(ವ್ಯಕ್ತಿಯಿಂದ ವಂಚನೆ), 420(ವಂಚನೆ), ಮತ್ತು 384(ಸುಲಿಗೆ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.