ಬೆಂಗಳೂರು : ಚಂದ ಚಂದದ ನರ್ಸ್ ಗಳು ನನಗೆ ಅಜ್ಜ ಅಂದ್ರು, ಇದರಿಂದ ನನಗೆ ನೋವಾಗ್ತಿತ್ತು ಎಂದು ಶಾಸಕ ರಾಜು ಕಾಗೆ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಿಕೆ ನಾಗನೂರ ಗ್ರಾಮದಲ್ಲಿ ದಸರಾ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹಾಸ್ಯ ಚಟಾಕಿ ಹಾರಿಸಿದರು.
ತಮ್ಮ ಜೀವನದಲ್ಲಿ ನಡೆದ ಘಟನೆಗಳ ಕುರಿತು ಮಾತನಾಡಿದ ಶಾಸಕ ರಾಜು ಕಾಗೆ ‘ಕೆಲವು ವರ್ಷಗಳ ಹಿಂದೆ ನನಗೆ ಆಪರೇಷನ್ ಆಗಿತ್ತು, ಡಾಕ್ಟರ್ಗಳು ಸರ್ ಚೆನ್ನಾಗಿದ್ದೀರಾ ಎಂದು ಬಂದು ಆರೋಗ್ಯ ವಿಚಾರಿಸುತ್ತಿದ್ದರು. ಆದಕ್ಕೆ ನಾನು ಹೇಳಿದೆ, ಸರ್..ನಾನು ಚೆನ್ನಾಗಿದ್ದೇನೆ..ಆದರೆ ನಿಮ್ಮಲ್ಲಿ ಚಂದ ಚಂದದ ನರ್ಸ್ ಗಳು ಇದ್ದಾರೆ, ಚಂದ ಚಂದದ ಹುಡುಗಿಯರು ಬಂದು ನನಗೆ ಅಜ್ಜ ಅನ್ನುತ್ತಿದ್ದರು. ಅಜ್ಜಾ ಅಂತಾ ಕರೆದಿದ್ದಕ್ಕೆ ನನಗೆ ಬೇಸರ ಆಗುತ್ತಿತ್ತು… ಎಂದು ಅಜ್ಜಾ ಅನ್ನುವುದಕ್ಕೆ ರಾಜು ಕಾಗೆ ಬೇಸರ ಹೊರ ಹಾಕಿದರು.ಇದರಿಂದ ನೆರೆದಿದ್ದ ಜನರು ಜೋರಾಗಿ ಕೇಕೆ, ವಿಶಲ್ ಹಾಕಿ ಜೋರಾಗಿ ನಕ್ಕಿದ್ದಾರೆ.