18 ವರ್ಷದ ಅತ್ಯಾಚಾರದ ಆರೋಪಿಗೆ ಜಾಮೀನು ಮಂಜೂರು ಮಾಡಿದ ಮಧ್ಯಪ್ರದೇಶ ಹೈಕೋರ್ಟ್ನ ಗ್ವಾಲಿಯರ್ ಪೀಠವು ಕೋರ್ಸ್ ತಿದ್ದುಪಡಿಗಾಗಿ ಆರೋಪಿಗೆ ಅವಕಾಶ ನೀಡಿ ಎಂದು ಹೇಳಿದೆ.
ಅರ್ಜಿ ವಿಚಾರಣೆ ನಡೆಸಿ ಮಾತನಾಡಿದ ನ್ಯಾಯಮೂರ್ತಿ ಆನಂದ್ ಪಾಠಕ್, ಅರ್ಜಿದಾರ 18 ವರ್ಷ ವಯಸ್ಸಿನವನಾಗಿದ್ದು ಯಾವುದೇ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿಲ್ಲ. ಅರ್ಜಿದಾರ ಒಬ್ಬ 18 ವರ್ಷದ ಯುವಕನಾಗಿದ್ದು ಆತನಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದ ಕಾರಣ ಕೋರ್ಸ್ ತಿದ್ದುಪಡಿಗೆ ಅವಕಾಶ ನೀಡಲಾಗುವುದು ಎಂದು ಆದೇಶ ನೀಡಿದ್ದಾರೆ.
ಅತ್ಯಾಚಾರ, ಅಪಹರಣ ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ ಬಂಧಕ್ಕೊಳಗಾಗಿರುವ 18 ವರ್ಷ ವಯಸ್ಸಿನ ಯುವಕ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದನು. ಅರ್ಜಿದಾರನ ಪರ ವಕೀಲ ಕಕ್ಷಿದಾರನ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ. ಹೀಗಾಗಿ ಆತ ಜೂನ್ 28ರಿಂದ ಜೈಲಿನಲ್ಲಿಯೇ ಇದ್ದಾನೆ. ಆತನಿಗೆ ಉತ್ತಮ ನಾಗರಿಕನಾಗಲು ಅವಕಾಶವನ್ನೇ ನೀಡುತ್ತಿಲ್ಲ ಎಂದು ಹೇಳಿದ್ರು.
ಜಾಮೀನು ಅರ್ಜಿಯ ಸಂಬಂಧ ಸಂಪೂರ್ಣ ವಾದ ಪ್ರತಿವಾದಗಳನ್ನು ಆಲಿಸಿದ ಕೋರ್ಟ್, ಅರ್ಜಿದಾರನಿಗೆ 50 ಸಾವಿರ ರೂಪಾಯಿ ಮೌಲ್ಯದ ಜಾಮೀನು ಬಾಂಡ್ನ ಅಡಿಯಲ್ಲಿ ಬಿಡುಗಡೆ ಮಾಡಲು ನಿರ್ದೇಶಿಸಲಾಯಿತು ಹಾಗೂ ಎರಡು ಮರಗಳನ್ನು ಪೋಷಿಸುವ ಮೂಲಕ ಸಮಾಜ ಸೇವೆ ಮಾಡಬೇಕು. ಫಲ ನೀಡುವ ಮರಗಳನ್ನು ನೆಟ್ಟು ಅವುಗಳನ್ನು ಸರಿಯಾಗಿ ಕಾವಲು ಕಾಯಬೇಕು. 30 ದಿನಗಳಲ್ಲಿ ತಾನು ನೆಟ್ಟ ಮರದ ಫೋಟೋವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ.