ಪಡಿತರ ಚೀಟಿದಾರರ ಇ-ಕೆವೈಸಿ ಪ್ರಕ್ರಿಯೆಯನ್ನು ಆಯಾ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಸಂಗ್ರಹಿಸಲಾಗುತ್ತಿದೆ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರ್ಕಾರ ಅಕ್ಟೋಬರ್ 1 ರಿಂದ 10 ರವರೆಗೆ ಅವಧಿ ವಿಸ್ತರಣೆಯನ್ನು ಮಾಡಿ ಕೊನೆಯ ಅವಕಾಶ ನೀಡಿದೆ.
ಇದುವರೆಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಮಾಡಿಸದ ಆದ್ಯತಾ ಮತ್ತು ಆದ್ಯತೇತರ ಪಡಿತರ ಚೀಟಿ ಕುಟುಂಬ ಸದಸ್ಯರುಗಳು ಕಡ್ಡಾಯವಾಗಿ ಈ ಅವಧಿಯ ಒಳಗಾಗಿ ಇ-ಕೆವೈಸಿ ಮಾಡಿಸುವುದು.
ಒಂದು ವೇಳೆ ತಮ್ಮ ಪಡಿತರ ಚೀಟಿಯಲ್ಲಿನ ಯಾವುದೇ ಸದಸ್ಯರು ಮರಣ ಹೊಂದಿದ್ದು ಅಥವಾ ಕೆಲಸ ನಿಮಿತ್ತ ವಿವಾಹವಾಗಿ ಬೇರೆ ಊರಿನಲ್ಲಿ ಅಥವಾ ಬೇರೆ ರಾಜ್ಯ, ವಿದೇಶದಲ್ಲಿ ನೆಲೆಸಿದ್ದಲ್ಲಿ ಅಂತಹ ಸದಸ್ಯರ ವಿವರವನ್ನು ನ್ಯಾಯಬೆಲೆ ಅಂಗಡಿ ಮಾಲಿಕರಿಗೆ ನೀಡುವುದು ಕುಟುಂಬ ಸದಸ್ಯರ ಕರ್ತವ್ಯವಾಗಿದ್ದು, ಮಾಹಿತಿ ನೀಡಲು ಕೋರಿದೆ.
6 ವರ್ಷ ಮೇಲ್ಪಟ್ಟ ಮಕ್ಕಳ ಆಧಾರ್ ಬಯೋ ಅಪ್‍ಡೇಟ್ ಮಾಡಿಸಿ ಇ-ಕೆವೈಸಿ ಮಾಡಿಸಲು ಇದು ಕೊನೆಯ ಅವಕಾಶವಾಗಿದ್ದು, ಅಕ್ಟೋಬರ್ 10 ರೊಳಗೆ ಇ-ಕೆವೈಸಿ ಮಾಡಿಸಲು ಕೋರಿದೆ.
ಇ-ಕೆವೈಸಿ ಮಾಡಿಸುವುದು ಪ್ರತಿಯೊಬ್ಬ ಪಡಿತರ ಚೀಟಿದಾರರ ಕರ್ತವ್ಯವಾಗಿದ್ದು, ಇ-ಕೆವೈಸಿ ಮಾಡಿಸದ ಪಡಿತರ ಸದಸ್ಯರ ವಿವರವನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಹಾಗೂ ಇ-ಕೆವೈಸಿ ಮಾಡಿಸದಿದ್ದಲ್ಲಿ ಮುಂದಿನ ಆಗುಹೋಗುಗಳಿಗೆ ಪಡಿತರ ಚೀಟಿದಾರರರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ಮಡಿಕೇರಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.