ಆಚಾರ್ಯ ಚಾಣಕ್ಯ ನೀತಿಗಳು ಆಡಳಿತಕ್ಕೆ ಮಾತ್ರವಲ್ಲದೆ ಮಾನವನ ಜೀವನಕ್ಕೂ ತುಂಬಾ ನೆರವಾಗುತ್ತವೆ. ಆಚಾರ್ಯ ಚಾಣಕ್ಯ ತಮ್ಮ ನೀತಿಶಾಸ್ತ್ರದಲ್ಲಿ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಮದುವೆ ನಂತ್ರ ಮನೆ ಸ್ವರ್ಗವಾಗ್ಬೇಕೆಂದ್ರೆ ಯಾವ ಹುಡುಗಿಯನ್ನು ಮದುವೆಯಾಗ್ಬೇಕೆಂದು ಚಾಣಕ್ಯ ಹೇಳಿದ್ದಾರೆ.
ಒಬ್ಬ ವ್ಯಕ್ತಿ ಮದುವೆಗೆ ಮೊದಲು ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ವೇಳೆ ಆಕೆ ಸೌಂದರ್ಯವನ್ನು ನೋಡಬಾರದು. ಆಕೆಯ ಗುಣವನ್ನು ನೋಡ್ಬೇಕೆಂದು ಚಾಣಕ್ಯ ಹೇಳಿದ್ದಾರೆ. ಚಾಣಕ್ಯನ ಪ್ರಕಾರ, ಪತ್ನಿ ಸದ್ಗುಣಿಯಾಗಿದ್ದರೆ ಕಷ್ಟದ ಸಮಯದಲ್ಲಿಯೂ ಕುಟುಂಬವನ್ನು ನಿರ್ವಹಿಸುತ್ತಾಳೆ.
ಮಹಿಳೆಗೆ ಬಾಹ್ಯ ಸೌಂದರ್ಯಕ್ಕಿಂತ ಮನಸ್ಸಿನ ಸೌಂದರ್ಯ ಹೆಚ್ಚಿರಬೇಕು. ಅವಳಿಗೆ ತಾಳ್ಮೆ ಇರಬೇಕು. ಮದುವೆಯಾಗುವ ಪತ್ನಿಗೆ ಧರ್ಮ, ಕರ್ಮಗಳ ಬಗ್ಗೆ ನಂಬಿಕೆ ಇರಬೇಕು. ಧರ್ಮದಲ್ಲಿ ನಂಬಿಕೆಯಿದ್ರೆ ಅವರು ಮರ್ಯಾದೆಯಿಂದ ಬದುಕುತ್ತಾರೆ.
ಆಚಾರ್ಯ ಚಾಣಕ್ಯನ ಪ್ರಕಾರ. ಮನುಷ್ಯನ ದೊಡ್ಡ ಶತ್ರು ಕೋಪ. ತುಂಬಾ ಕೋಪಗೊಳ್ಳುವ ಮಹಿಳೆ ಕುಟುಂಬವನ್ನು ಎಂದಿಗೂ ಸಂತೋಷವಾಗಿಡಲು ಸಾಧ್ಯವಿಲ್ಲ. ಹಾಗಾಗಿ ಕೋಪ ಕಡಿಮೆ ಇರುವ ಮಹಿಳೆಯನ್ನು ಮದುವೆಯಾಗ್ಬೇಕು ಎನ್ನುತ್ತಾರೆ ಆಚಾರ್ಯ ಚಾಣಕ್ಯ.
ಇಷ್ಟವಿಲ್ಲದ ಮಹಿಳೆಯನ್ನು ಎಂದೂ ಮದುವೆಯಾಗಬಾರದು ಎನ್ನುತ್ತಾರೆ ಚಾಣಕ್ಯ. ಆಕೆ ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ಹಾಗೆ ಕುಟುಂಬವನ್ನು ಸಂತೋಷವಾಗಿಡುವುದಿಲ್ಲ. ಕೌಟುಂಬಿಕ ಬೆಳವಣಿಗೆಯಲ್ಲಿ ಪತ್ನಿಯರು ಪ್ರಮುಖ ಪಾತ್ರ ವಹಿಸುತ್ತಾರೆ. ವಿದ್ಯಾವಂತ ಮತ್ತು ಸುಸಂಸ್ಕೃತ ಮಹಿಳೆ ಮನೆಗೆ ಸೊಸೆಯಾಗಿ ಬಂದರೆ ಸಂಸಾರದಲ್ಲಿ ಸೌಹಾರ್ದತೆ ಹೆಚ್ಚಾಗುತ್ತದೆ, ಇದರಿಂದ ಕುಟುಂಬದ ಸದಸ್ಯರು ಪ್ರಗತಿ ಸಾಧಿಸುತ್ತಾರೆ ಎಂದು ಚಾಣಕ್ಯ ಹೇಳ್ತಾರೆ.