ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿರುವಾಗಲೇ ಮಹಿಷ ದಸರಾ ಆಚರಣೆ ನಡೆಸಲು ಮಹಿಷ ದಸರಾ ಸಮಿತಿ ಮುಂದಾಗಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಮಧ್ಯೆ ಮಹಿಷ ದಸರಾ ಸಮಿತಿ ಚಾಮುಂಡಿ ಬೆಟ್ಟಕ್ಕೆ ‘ಮಹಿಷ ಬೆಟ್ಟ’ ಎಂದು ಹೆಸರು ಬದಲಿಸುವ ಮೂಲಕ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಮಹಿಷ ದಸರಾ ಆಚರಣ ಸಮಿತಿ ಬಿಡುಗಡೆಗೊಳಿಸಿರುವ ಆಹ್ವಾನ ಪತ್ರಿಕೆಯಲ್ಲಿ ಮೈಸೂರು ಬದಲಿಗೆ ’ಮಹಿಷೂರು’, ಚಾಮುಂಡಿ ಬೆಟ್ಟ ಬದಲಿಗೆ ’ಮಹಿಷ ಬೆಟ್ಟ’ ಎಂದು ಹೆಸರು ಮುದ್ರಿಸಿದೆ.
ಇದೇ ತಿಂಗಳು 29ರಂದು ಮಹಿಷ ದಸರಾ ಆಚರಣೆ ನಡೆಸಲು ಸಮಿತಿ ನಿರ್ಧರಿಸಿದೆ. ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರನಿಗೆ ಪುಷ್ಪಾರ್ಚನೆ ಮಾಡಿ ಬಳಿಕ ಪುಅರಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಮುಂದಾದರೆ ಚಾಮುಂಡಿ ಚಲೋ ಹೋರಾಟ ನಡೆಸುವುದಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆಯೇ ಮಹಿಷ ದಸರಾ ಆಹ್ವಾನ ಪತ್ರಿಕೆಯಲ್ಲಿ ಚಾಮುಂಡಿ ಬೆಟ್ಟದ ಹೆಸರನ್ನು ಮಹಿಷ ಬೆಟ್ಟ ಎಂದು ಬದಲಿಸಿವ ಮೂಲಕ ಮತ್ತೊಂದು ವಿವಾದದ ಕಿಡಿ ಹೊತ್ತಿಸಿದೆ.