ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಮೈದಾನವನ್ನು ಯಾವುದೇ ಚಟುವಟಿಕೆಗಳಿಗೆ ನೀಡದಂತೆ ರಾಜ್ಯ ಗುಪ್ತದಳದಿಂದ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ವಿವಿಧ ಕಾರಣಗಳಿಗಾಗಿ ಮೈದಾನವನ್ನು ಯಾರಿಗೂ ನೀಡಬಾರದು. ಯಥಾಸ್ಥಿತಿ ಕಾಪಾಡಿಕೊಳ್ಳಬೇಕೆಂದು ಗುಪ್ತ ದಳದಿಂದ ಮಾಹಿತಿ ನೀಡಲಾಗಿದೆ.
ಇನ್ನು ಚಾಮರಾಜಪೇಟೆ ಮೈದಾನದಲ್ಲಿ ಧ್ವಜಾರೋಹಣ ಮಾಡುತ್ತೇವೆ ಎಂದು ಶಾಂತಿ ಸಭೆಯ ಬಳಿಕ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಹೇಳಿದ್ದಾರೆ. ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಪಾಲಿಸುತ್ತೇವೆ. ಬಿಬಿಎಂಪಿ ಆದೇಶವನ್ನು ಒಪ್ಪಲು ಆಗುವುದಿಲ್ಲ. ಕಂದಾಯ ಸಚಿವರು ಕೋರ್ಟ್ ಆದೇಶವನ್ನು ಉಲ್ಲಂಘಿಸಲಾಗಲ್ಲ. ಮೈದಾನದ ಬಗ್ಗೆ ಕಂದಾಯ ಇಲಾಖೆ ಬಳಿ ದಾಖಲೆ ಇದ್ದರೆ ನೀಡಲಿ ಎಂದರು.
ಸಭೆಯಲ್ಲಿ ಪೊಲೀಸರು ಶಾಂತಿ ಕಾಪಾಡುವಂತೆ, ಪ್ರಚೋದನಾಕಾರಿ ಹೇಳಿಕೆ ನೀಡಬೇಡಿ ಎಂದು ತಿಳಿಸಿದ್ದಾರೆ. ಹಿಂದೂ, ಮುಸ್ಲಿಂ ಎಲ್ಲರೂ ಒಂದೇ ಅಬ್ದುಲ್ ರಜಾಕ್ ಹೇಳಿದ್ದಾರೆ.