ಚಾಮರಾಜನಗರ: ಚಾಮರಾಜನಗರದ ವಿದೇಶಿ ಅಂಚೆ ಕಚೇರಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದ ವೇಳೆ ಕೊರಿಯರ್ ನಲ್ಲಿ ಡ್ರಗ್ಸ್ ಬಾಕ್ಸ್ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ವಿದೇಶದಿಂದ ಬಂದ ಕೊರಿಯರ್ ಗಳ ಮೇಲೆ ನಕಲಿ ವಿಳಾಸವಿದ್ದು, ಈ ಮೂಲಕ ಮಾದಕ ವಸ್ತುಗಳನ್ನು ಸರಬರಾಜು ಮಾಡಲಾಗುತ್ತಿರುವುದು ಪತ್ತೆಯಾಗಿದೆ. ಪೆಡ್ಲರ್ ಗಳು ಆನ್ ಲೈನ್ ನಲ್ಲಿ ಡ್ರಗ್ಸ್ ಬುಕ್ ಮಾಡಿ ತಪ್ಪು ವಿಳಾಸ ನೀಡಿ ತಲುಪಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೆಡ್ಲರ್ ಗಳು ಆನ್ ಲೈನ್ ಡ್ರಗ್ಸ್ ಬುಕ್ ಮಾಡಿ ಅಂಚೆ ಮೂಲಕ ತರಿಸಿಕೊಳ್ಳುತ್ತಿದ್ದರು. ವಿದೇಶದಿಂದ ಬಂದ ಡ್ರಗ್ಸ್ ಪ್ಯಾಕೇಟ್ ಗಳು ಕೊರಿಯರ್ ಏಜೆನ್ಸಿಗೆ ತಲುಪುತ್ತಿದ್ದವು. ಏಜೆನ್ಸಿಗೆ ತಲುಪಿದ ಬಳಿಕ ಪೆಡ್ಲರ್ ಗೆ ಡೆಲವರಿ ಟ್ರ್ಯಾಕಿಂಗ್ ಮಾಹಿತಿ ರವಾನಿಸಲಾಗುತ್ತಿತ್ತು. ತಪ್ಪಾದ ವಿಳಾಸಕ್ಕೆ ಡ್ರಗ್ಸ್ ಡೆಲವರಿಯಾಗುವ ಮುನ್ನ ಟ್ರ್ಯಾಕಿಂಗ್ ಮಾಹಿತಿ ಆಧರಿಸಿ ಡ್ರಗ್ಸ್ ಬಾಕ್ಸ್ ಪಡೆಯುತ್ತಿದ್ದರು.
ದಾಳಿ ವೇಳೆ 606 ಮಾದಕ ವಸ್ತುವಿರುವ ಪಾರ್ಸಲ್ ಪ್ಯಾಕೇಟ್ ಗಳು ಪತ್ತೆಯಾಗಿವೆ. ಥೈಲ್ಯಾಂಡ್, ಯುಎಸ್, ಯುಕೆಯಿಂದ ಡ್ರಗ್ಸ್ ಬಂದಿತ್ತು. ಸಿಸಿಬಿ ಪೊಲೀಸರು ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ 12 ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.