ಚಾಮರಾಜನಗರ: ಜಮೀನುಗಳಿಗೆ ನುಗ್ಗಿ ಜೋಳ ತಿಂದಿದ್ದ ಆನೆ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲುಕಿನ ಜಾಗೇರಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
25ರಿಂದ 30 ವರ್ಷದ ಗಂಡಾನೆ ಮೃತಪಟ್ಟಿದೆ. ಜಾಗೇರಿ ಗ್ರಾಮದ ಸಿಆರ್ ನಗರದ ನಿವಾಸಿ ಶೇಷು ಎಂಬುವವರ ಜಮೀನಿನಲ್ಲಿ ಆನೆ ಮೃತಪಟ್ಟಿದೆ.
ಜಮೀನಿಗೆ ನುಗ್ಗಿದ್ದ ಆನೆ ಅತಿಯಾಗಿ ಜೋಳ ತಿಂದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕರಿಗಳು, ಪಶು ವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನೆ ಸಾವು ಸಂಬಂಧ ಪ್ರಕರನ ದಾಖಲಾಗಿದೆ.