
ಕಾಡಂಚಿನ ರಸ್ತೆಯಲ್ಲಿ ಸಾಗುತ್ತಿದ್ದ ಲಾರಿಯನ್ನು ಅಡ್ಡಗಟ್ಟಿ ಅದರಲ್ಲಿದ್ದ ಕಬ್ಬನ್ನು ಸವಿದ ಕಾಡಾನೆಯೊಂದರ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಕಾಡಾನೆಯೊಂದು ಬಾಳೆಹಣ್ಣು ತಿಂದಿರುವ ಮತ್ತೊಂದು ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಈ ಘಟನೆ ಚಾಮರಾಜನಗರ ತಾಲೂಕಿನ ಗಡಿಯಂಚಿನ ಗ್ರಾಮ ಹಾಸನೂರಿನಲ್ಲಿ ನಡೆದಿದ್ದು, ಕಾಡಾನೆಯೊಂದು ಅಂಗಡಿ ಬಾಗಿಲು ಮುರಿದು ಬಾಳೆಹಣ್ಣನ್ನು ಸವಿದಿದೆ.
ಹಾಸನೂರು ಗ್ರಾಮ ಅರಣ್ಯದ ನಡುವೆ ಇದ್ದು, ರಾಜ್ಯದ ಕಟ್ಟ ಕಡೆಯ ಗಡಿಯಾಗಿದೆ. ಈ ಪ್ರದೇಶದಲ್ಲಿ ಕಾಡಾನೆಗಳು ಸೇರಿದಂತೆ ಕಾಡು ಪ್ರಾಣಿಗಳ ಸಂಚಾರ ಸಾಮಾನ್ಯವಾಗಿದೆ.
