
2008 ನವೆಂಬರ್ 7ರಂದು ತೆರೆಕಂಡಿದ್ದ ದಿನಕರ್ ತೂಗುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿದ್ದ ಬ್ಲ್ಯಾಕ್ ಬಸ್ಟರ್ ಚಿತ್ರ ‘ನವಗ್ರಹ’ ಇಂದು ಮರು ಬಿಡುಗಡೆಯಾಗಿದೆ. ದರ್ಶನ್ ಅಭಿಮಾನಿಗಳ ಒತ್ತಾಯದ ಮೇರೆಗೆ ರಿಲೀಸ್ ಮಾಡಲಾಗಿದ್ದು, ಥಿಯೇಟರ್ ಮುಂದೆ ಸಂಭ್ರಮಿಸುತ್ತಿದ್ದಾರೆ.
ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಖಳನಾಯಕರ ಪುತ್ರರಾದ ವಿನೋದ್ ಪ್ರಭಾಕರ್, ಸೃಜನ್ ಲೋಕೇಶ್, ಗಿರಿ ದಿನೇಶ್, ಧರ್ಮ ಕೀರ್ತಿರಾಜ್, ತರುಣ್ ಸುಧೀರ್, ನಾಗೇಂದ್ರ ಅರಸ್ ಅಭಿನಯಿಸಿದ್ದು, ವರ್ಷ ಹಾಗೂ ಶರ್ಮಿಳಾ ಮಾಂಡ್ರೆ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.
ಇನ್ನುಳಿದಂತೆ ಸೌರವ್, ಕುರಿ ಪ್ರತಾಪ್, ಮಳವಳ್ಳಿ ಸಾಯಿಕೃಷ್ಣ, ವಿನೋದ್ ವರದರಾಜ್, ವಿಕ್ರಮ್ ಉದಯಕುಮಾರ್ ಉಳಿದ ಪಾತ್ರವರ್ಗದಲ್ಲಿದ್ದಾರೆ. ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಮೀನಾ ತೂಗುದೀಪ ಶ್ರೀನಿವಾಸ್ ನಿರ್ಮಾಣ ಮಾಡಿದ್ದು ವಿ ಹರಿಕೃಷ್ಣ ಸಂಗೀತ ಸಂಯೋಜನೆ ನೀಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ “ನವಗ್ರಹ” ಚಿತ್ರ ಇಂದು ರಾಜ್ಯದಾದ್ಯಂತ ಮರುಬಿಡುಗಡೆಯಾಗುತ್ತಿದೆ. #Navagraha #NavagrahaReRelease #Cineloka @dasadarshan @dinakar219 pic.twitter.com/3uKUEUFrem
— Cineloka.co.in (@cineloka) November 8, 2024