![](https://kannadadunia.com/wp-content/uploads/2024/01/4a857f45-372c-41c1-9e28-a65b5e2614f8.jpg)
ಕೆ ಎಮ್ ರಾಘು ನಿರ್ದೇಶನದ ‘ಜಸ್ಟ್ ಪಾಸ್’ ಸಿನಿಮಾ ತನ್ನ ಟೀಸರ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇದೇ ಜನವರಿ 12 ರಂದು ವಿಡಿಯೋ ಹಾಡೊಂದನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಕಾರ್ಯಕ್ರಮದ ಅತಿಥಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಲಿದ್ದು, ಅವರ ಕೈಯಲ್ಲಿ ಈ ವಿಡಿಯೋ ಹಾಡನ್ನು ಲಾಂಚ್ ಮಾಡಿಸಲಿದ್ದಾರೆ.
ರಾಯ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಕೆವಿ ಶಶಿಧರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಶ್ರೀ ಸೇರಿದಂತೆ ಪ್ರಣತಿ, ಚಂದುಶ್ರೀ, ಗಗನ್, ಅರ್ಪಿತ, ಡುಮ್ಮ ವಿಶ್ವಾಸ್, ಅಭಿ, ನಿಖಿಲ್, ಯಶಿಕಾ ತೆರೆ ಹಂಚಿಕೊಂಡಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ಸಂಯೋಜನೆ ನೀಡಿದ್ದಾರೆ.
![](https://kannadadunia.com/wp-content/uploads/2024/01/f028d8e4-8e12-429a-b2a8-56038140a80d-400x597.jpg)