
‘ಟಗರು ಪಲ್ಯ’ ಚಿತ್ರ ತಂಡ ನಿನ್ನೆಯಷ್ಟೇ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದು, ಇದೀಗ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಇದೇ ತಿಂಗಳು ಅಕ್ಟೋಬರ್ 18ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕೈಯಲ್ಲಿ ಈ ಸಿನಿಮಾದ ಟ್ರೈಲರ್ ಲಾಂಚ್ ಮಾಡಿಸುವುದಾಗಿ ಇಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಈ ಚಿತ್ರದಲ್ಲಿ ನಾಗಭೂಷಣ್ ಮತ್ತು ನೆನಪಿರಲಿ ಪ್ರೇಮ್ ಪುತ್ರಿ ಅಮೃತ, ನಾಯಕ – ನಾಯಕಿಯಾಗಿದ್ದು, ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ, ವಾಸುಕಿ ವೈಭವ್, ಬಸಪ್ಪ ಬಿರಾದರ್ ಬಣ್ಣ ಹಚ್ಚಿದ್ದಾರೆ.
ಉಮೇಶ್ ಕೆ ಕೃಪ ನಿರ್ದೇಶಿಸಿದ್ದು, ಡಾಲಿ ಧನಂಜಯ್ ತಮ್ಮ ಡಾಲಿ ಪಿಚ್ಚರ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದಾರೆ. ಮಧು ಅವರ ಸಂಕಲನ, ಎಸ್ ಕೆ ರಾವ್ ಛಾಯಾಗ್ರಾಹಣವಿದೆ. ಕಲ್ಯಾಣ್ ಮಂಜುನಾಥ್ ಹಾಗೂ ಭರತ್ ನಾಯಕ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇದೇ ತಿಂಗಳು ಅಕ್ಟೋಬರ್ 27ರಂದು ಈ ಸಿನಿಮಾ ರಾಜ್ಯದ್ಯಂತ ತೆರೆ ಕಾಣಲಿದೆ.
