
2003 ಜನವರಿ ಮೂರರಂದು ತೆರೆಕಂಡಿದ್ದ ಪ್ರೇಮ್ ನಿರ್ದೇಶನದ ಈ ಚಿತ್ರ ಸುಮಾರು 700ಕ್ಕು ಹೆಚ್ಚು ದಿನಗಳ ಕಾಲ ಪ್ರದರ್ಶನಗೊಳ್ಳುವ ಮೂಲಕ ಸ್ಯಾಂಡಲ್ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ರೌಡಿಸಂ ಹಾಗೂ ಲವ್ ಸ್ಟೋರಿ ಕಥಾ ಹಂದರ ಹೊಂದಿರುವ ಈ ಸಿನಿಮಾದಲ್ಲಿ ದರ್ಶನ್ ಗೆ ಜೋಡಿಯಾಗಿ ಅಭಿನಯಶ್ರೀ ಅಭಿನಯಿಸಿದ್ದು, ಮೈಕೋ ನಾಗರಾಜ್, ಉಮೇಶ್ ಪುಂಗ, ನಂದಕಿಶೋರ್, ದಶಾವರ ಚಂದ್ರು, ನಂದೀಶ್, ಬೀ ಜಯಶ್ರೀ, ಫೈವ್ ಸ್ಟಾರ್ ಗಣೇಶ್ ಹಾಗೂ ಸುರೇಶ್ ಶರ್ಮಾ ಬಣ್ಣ ಹಚ್ಚಿದ್ದಾರೆ. ಗುರುಕಿರಣ್ ಸಂಗೀತ ಸಂಯೋಜನೆ ನೀಡಿದ್ದು, ಸಂತೋಷ್ ಎಂಟರ್ಪ್ರೈಸಸ್ ಬ್ಯಾನರ್ ನಲ್ಲಿ ಆನೇಕಲ್ ಬಾಲರಾಜು ನಿರ್ಮಾಣ ಮಾಡಿದ್ದಾರೆ.