ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಲಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣ ತನಿಖೆಯಾಗಲಿ ಎಂದರು.
ಸಚಿವರು ಭದ್ರತಾ ಸಿಬ್ಬಂದಿಗಳನ್ನು ಬಿಟ್ಟು, ಎಸ್ಕಾರ್ಟ್ ವಾಹನಗಳನ್ನು ಬಿಟ್ಟು ಹೋಗಿದ್ದೇಕೆ? ಕಾರು ಚಾಲಕ ಯಾರು? ಈಗ ಕಾರು ಚಾಲಕ ಎಲ್ಲಿದ್ದಾನೆ? ನಾಯಿ ಅಡ್ಡಬಂತು ಅಪಘಾತವಾಗಿದೆ ಎಂದಿದ್ದಾರೆ. ಹಿಂದಿನಿಂದ ಕಾರು ಡಿಕ್ಕಿಯಾಗಿದೆ ಎಂದಿದ್ದಾರೆ. ತರಾತುರಿಯಲ್ಲಿ ಪೊಲೀಸರ ಸಮ್ಮುಖದಲ್ಲಿ ಕಾರು ಸ್ಥಳಾಂತರ ಮಾಡಿದ್ದೇಕೆ? ದೂರು ಕೂಡ ದಾಖಲಾಗಿಲ್ಲ. ಎಫ್ ಐ ಆರ್ ಕೂಡ ದಾಖಲಾಗಿಲ್ಲ. ಅಪಘಾತದ ಪ್ರಕರನ ತಪ್ಪು ದಾರಿಗೆ ಎಳೆಯಬಾರದು. ಹಾಗಾಗಿ ತನಿಖೆಯಾಗಬೇಕು.
ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಸಚಿವರ ಟಿಪಿ ಕೂಡ ಇಲ್ಲ, ಎಸ್ಕಾರ್ಟ್ ಕೂಡ ಇಲ್ಲದೇ ಪ್ರಯಾಣಿಸಿದ್ದು ಯಾಕೆ ಎಂಬುದು ತಿಳಿಯಬೇಕು ಎಂದಿದ್ದಾರೆ.