ಜ್ಯೋತ್ಸ್ನಾ ಕೆ ರಾಜ್ ನಿರ್ದೇಶನದ ಚೈತ್ರ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ‘ಸಾಂಕೇತ್’ ಚಿತ್ರ ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ. ತನ್ನ ಟೀಸರ್ ಹಾಗೂ ಟ್ರೈಲರ್ ಮೂಲಕವೇ ಸಾಕಷ್ಟು ಕುತೂಹಲ ಕೆರಳಿಸಿರುವ ಈ ಸಿನಿಮಾ ವೀಕ್ಷಿಸಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ರಿವರ್ ಸ್ಟೀಮ್ ಸ್ಟುಡಿಯೋಸ್ ಬ್ಯಾನರ್ ನಲ್ಲಿ ನಿಶಾನ್ ನಿರ್ಮಾಣ ಮಾಡಿದ್ದು, ಚೈತ್ರ ಶೆಟ್ಟಿ ಹಾಗೂ ವಿಕ್ಕಿ ರಾವ್ ಪ್ರಮುಖ ಪಾತ್ರದಲ್ಲಿದ್ದಾರೆ, ಇನ್ನುಳಿದಂತೆ ಮೋಹನ್ ಶೇಣಿ, ರೂಪಶ್ರೀ ವೋರ್ಖಾಡಿ, ರಾಹುಲ್ ಅಮೀನ್, ನಿರೀಕ್ಷಾ ಶೆಟ್ಟಿ, ಸದಾಶಿವ ಅಮೀನ್, ನಿರೀಕ್ಷಾ ರಾಣಿ, ರಜೀತ್ ಕದ್ರಿ, ಮೇಘನಾ ರಕ್ಷಿತಾ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ನಿರ್ದೇಶಕ ಜ್ಯೋತ್ಸ್ನಾ ಕೆ ರಾಜ್ ಅವರ ಸಂಕಲನವಿದ್ದು, ಪ್ರಕಾಶ್ ವಿ ರಾವ್ ಸಾಹಿತ್ಯವಿದೆ. ಶಿವ ಆಚಾರ್ಯ ಸಂಭಾಷಣೆ ಬರೆದಿದ್ದಾರೆ.