ಬೆಂಗಳೂರು: ಇಂದಿರಾ ಕ್ಯಾಂಟೀನ್ ಬಾಕಿ ಬಿಲ್ ಗೆ ಷಡ್ಯಂತ್ರ ನಡೆಸಲಾಗಿದೆ ಎಂಬ ಹೇಳಿಕೆ ನೀಡಿದ್ದ ಬಂಧಿತ ಚೈತ್ರಾ ಕುಂದಾಪುರ ಆರೋಪಕ್ಕೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತುಷಾರ್ ಗಿರಿನಾಥ್, ಇಂದಿರಾ ಕ್ಯಾಂಟೀನ್ ಬಹುತೇಕ ಬಿಲ್ ಕ್ಲೀಯರ್ ಮಾಡಲಾಗಿದೆ. ಕೆಲ ಸಣ್ಣಪುಟ್ಟ ಬಿಲ್ ಬಾಕಿ ಇರಬಹುದು. ಕಾನೂನಾತ್ಮಕವಾಗಿ ಇಂದಿರಾ ಕ್ಯಾಂಟೀನ್ ಬಿಲ್ ಪಾವತಿಯಾಗಿದೆ ಎಂದು ತಿಳಿಸಿದ್ದಾರೆ.
ಗುತ್ತಿಗೆದಾರರಿಗೆ ಯಾವುದೇ ರೀತಿಯ ಬಿಲ್ ಬಾಕಿ ಉಳಿಸಿಕೊಂಡಿಲ್ಲ. ಸಣ್ಣಪುಟ್ಟ ಬಿಲ್ ಗಳಿದ್ದರೆ ಕ್ಲೀಯರ್ ಮಾಡುವಂತೆಯೂ ಆಯಾ ವಲಯ ಅಧಿಕರಿಗಳಿಗೆ ಸೂಚಿಸಲಗಿದೆ ಎಂದು ಸ್ಪಷ್ಟಪಡಿಸಿದರು.