alex Certify BREAKING : ಚೈತ್ರಾಗೆ ಪಿಟ್ಸ್ ಬಂದಿಲ್ಲ, ಆರೋಗ್ಯ ಸ್ಥಿರವಾಗಿದೆ : ವಿಕ್ಟೋರಿಯಾ ಆಸ್ಪತ್ರೆ ವೈದ್ಯೆ ಡಾ.ಆಸೀಮಾ ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಚೈತ್ರಾಗೆ ಪಿಟ್ಸ್ ಬಂದಿಲ್ಲ, ಆರೋಗ್ಯ ಸ್ಥಿರವಾಗಿದೆ : ವಿಕ್ಟೋರಿಯಾ ಆಸ್ಪತ್ರೆ ವೈದ್ಯೆ ಡಾ.ಆಸೀಮಾ ಸ್ಪಷ್ಟನೆ

ಬೆಂಗಳೂರು : ಚೈತ್ರಾ ಕುಂದಾಪುರಗೆ ಪಿಟ್ಸ್ ಬಂದಿಲ್ಲ, ಆರೋಗ್ಯ ಸ್ಥಿರವಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯೆ ಡಾ.ಆಸೀಮಾ ಸ್ಪಷ್ಟನೆ ನೀಡಿದ್ದಾರೆ.

ಇಂದು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಕುಸಿದು ಬಿದ್ದ ಚೈತ್ರಾ ಕುಂದಾಪುರ ಅವರನ್ನು ಆಸ್ಪತ್ರೆಗೆದಾಖಲಿಸಲಾಗಿತ್ತು. ಚೈತ್ರಾ ಆರೋಗ್ಯದ ಬಗ್ಗೆ ಅಪ್ ಡೇಟ್ ನೀಡಿದ ವಿಕ್ಟೋರಿಯಾ ಆಸ್ಪತ್ರೆ ವೈದ್ಯೆ ಡಾ.ಆಸೀಮಾ ‘ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಚೈತ್ರಾಗೆ ಪಿಟ್ಸ್ ಇರಲಿಲ್ಲ, ಎಲ್ಲಾ ರೀತಿಯ ಸ್ಕ್ಯಾನಿಂಗ್ ಮಾಡಲಾಗಿದೆ. ಸದ್ಯಕ್ಕೆ ಐಸಿಯುನಲ್ಲಿ ಚೈತ್ರಾಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿಕ್ಟೋರಿಯಾ ಆಸ್ಪತ್ರೆ ಡಾ. ಅಸೀಮಾ ಹೇಳಿಕೆ ನೀಡಿದ್ದಾರೆ.

ಎಂಎಲ್ ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಒಬ್ಬರಿಗೆ 5 ಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಹಿಂದೂ ಹೋರಾಟಗಾರ್ತಿ ಚಿತ್ರಾ ಕುಂದಾಪುರ ಮೂರ್ಛೆ ರೋಗದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿತ್ತು.
ಸಿಸಿಬಿ ಕಚೇರಿಯಲ್ಲಿ ನಿನ್ನೆ ವಿಚಾರಣೆಗೆ ಹಾಜರಾಗಿದ್ದ ವೇಳೆಯೂ ಏಕಾಏಕಿ ಚೈತ್ರಾ ಕುಂದಾಪುರ ಕುಸಿದುಬಿದ್ದಿದ್ದರು. ವಿಚಾರಣೆ ಬಳಿಕ ಅವರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ನಂತರ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದ ಚೈತ್ರಾ ಕುಂದಾಪುರ, ಮತ್ತೆ ಮೂರ್ಛೆ ಹೋಗಿದ್ದು, ಆಕೆಯ ಬಾಯಿಯಲ್ಲಿ ನೊರೆ ಕೂಡ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಚೈತ್ರಾ ಕುಂದಾಪುರ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...