
ಬೀಜಿಂಗ್: ಜಗತ್ತಿಗೆ ಕೊರೊನಾ ಮಹಾಮಾರಿಯಂತಹ ವೈರಸ್ ಹರಡಿಸಿದ್ದ ಚೀನಾದಲ್ಲಿ ಮತ್ತೊಂದು ಅಪಾಯಕಾರಿ ವೈರಸ್ ಪತ್ತೆಯಾಗಿದೆ. ಈ ವೈರಸ್ ಕೂಡ ಕೋವಿಡ್ ನಂತೆಯೇ ಮಾರಣಾಂತಿಕ ಸೋಂಕು ಎಂದು ತಿಳಿದುಬಂದಿದೆ.
ಹೊಸಬಗೆಯ ವೈರಸ್ ಗೆ HKU5-CoV-2 ಎಂದು ಹೆಸರಿಡಲಾಗಿದೆ. ಇದು ಬಾವಲಿಯಿಂದ ಹರಡುವ ವೈರಸ್ ಆಗಿದೆ. ಕೊರೊನಾ ವೈರಸ್ ನಂತೆ ವರ್ತಿಸುವ ಹೊಸ ವೈರಸ್ ಮಾನವನ ಜೀವಕೋಶದ ಪ್ರೋಟಿನ್ ಗಳನ್ನು ಹಾನಿ ಮಾಡುತ್ತದೆ. ಇದು ಒಬ್ಬರಿಂದ ಇನ್ನೊಬ್ಬರಿಗೆ ಗಾಳಿ ಮೂಲಕ ಹರಡುವ ರೋಗದ ವೈರಸ್ ಆಗಿದೆ.
ಕೊರೊನಾ ವೈರಸ್ ನಿಂದ ರೋಗನಿರೋಧಕ ಶಕ್ತಿ ಸೃಷ್ಟಿಯಗಿದ್ದು, ಹಾಗಾಗಿ ಹೊಸ ವೈರಸ್ ಹೆಚ್ಚು ಪರಿಣಾಮ ಬೀರಲ್ಲ ಎಂದು ಚೀನಾದ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.