ಚಿಕ್ಕಬಳ್ಳಾಪುರ: ಬಸ್ ಹತ್ತುವಾಗ ರಶ್ ನಲ್ಲಿ ಮಾಂಗಲ್ಯ ಸರ ಕದ್ದು ಕಳ್ಳಿ ಸಿಕ್ಕಿಬಿದ್ದ ಘಟನೆ ಚಿಕ್ಕಬಳ್ಳಾಪುರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ನಾನು ಸರಗಳ್ಳತನ ಮಾಡಿಲ್ಲ ಎಂದು ಮಹಿಳೆ ಹೈಡ್ರಾಮಾ ಮಾಡಿದ್ದಾಳೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮಾಸ್ತಿಯಿಂದ ಇಶಾ ಫೌಂಡೇಷನ್ ಗೆ ಬಂದಿದ್ದ ಮಹಿಳೆ ಸುಮಾರು 1.25 ಲಕ್ಷ ರೂಪಾಯಿ ಮೌಲ್ಯದ ಮಾಂಗಲ್ಯ ಸರ ಎಗರಿಸಿದ್ದಾಳೆ.
ಚಿಕ್ಕಬಳ್ಳಾಪುರದಿಂದ ಕೋಲಾರಕ್ಕೆ ಹಿಂತಿರುಗುವಾಗ ಸರಗಳ್ಳತನ ಮಾಡಿದ್ದಾಳೆ. ಸರಗಳ್ಳಿಯ ಜುಟ್ಟು ಹಿಡಿದು ಎಳೆದು ಪೊಲೀಸರಿಗೆ ಸರ ಕಳೆದುಕೊಂಡ ಮಹಿಳೆ ಒಪ್ಪಿಸಿದ್ದಾರೆ. ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಸರಗಳ್ಳಿಯ ವಿಚಾರಣೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.