alex Certify ವಿದ್ಯಾರ್ಥಿಗಳಿಗೆ ಹೊಸ ಮಾದರಿ ಪರೀಕ್ಷೆ: ಜೂನ್ 1 ರಿಂದ 12 ನೇ ತರಗತಿ ‘ಎಕ್ಸಾಂ ಫ್ರಂ ಹೋಂ’ ನಡೆಸಲು ಛತ್ತಿಸ್ ಗಢ ಸರ್ಕಾರ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿಗಳಿಗೆ ಹೊಸ ಮಾದರಿ ಪರೀಕ್ಷೆ: ಜೂನ್ 1 ರಿಂದ 12 ನೇ ತರಗತಿ ‘ಎಕ್ಸಾಂ ಫ್ರಂ ಹೋಂ’ ನಡೆಸಲು ಛತ್ತಿಸ್ ಗಢ ಸರ್ಕಾರ ನಿರ್ಧಾರ

ರಾಯಪುರ: ಕೋವಿಡ್ ಸಾಂಕ್ರಾಮಿಕ ರೋಗದ ಕಾರಣದಿಂದ 12 ನೇ ತರಗತಿಯ ಪರೀಕ್ಷೆಗಳನ್ನು ಮನೆಯಿಂದಲೇ ನಡೆಸಲು ಛತ್ತಿಸ್ ಗಢ ಪ್ರೌಢ ಶಿಕ್ಷಣ ಮಂಡಳಿ ತೀರ್ಮಾನಿಸಿದೆ.

ಈ ಹೊಸ ಮಾದರಿಯ ಅಡಿಯಲ್ಲಿ ವಿದ್ಯಾರ್ಥಿಗಳು ನಿಗದಿತ ಕೇಂದ್ರಗಳಿಂದ ಪ್ರಶ್ನೆ ಪತ್ರಿಕೆಗಳು ಮತ್ತು ಖಾಲಿ ಉತ್ತರ ಪತ್ರಿಕೆಗಳನ್ನು ಸಂಗ್ರಹಿಸಬಹುದು. ಪ್ರಶ್ನೆ ಪತ್ರಿಕೆ ಮತ್ತು ಖಾಲಿ ಉತ್ತರ ಪತ್ರಿಕೆಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಐದು ದಿನದಲ್ಲಿ ಉತ್ತರ ಬರೆದು ಸಲ್ಲಿಸಲು ತಿಳಿಸಲಾಗಿದೆ.

ಜೂನ್ 1 ರಿಂದ 5 ರವರೆಗೆ 5 ದಿನಗಳ ಕಾಲ ಕಾಲಾವಕಾಶ ನೀಡಲಾಗುತ್ತದೆ. ಛತ್ತಿಸ್ ಗಢ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಕಾರ್ಯದರ್ಶಿ ವಿ.ಕೆ. ಗೋಯಲ್ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದಾರೆ. 2.86 ಲಕ್ಷ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಛತ್ತೀಸ್ ಗಡ ಪ್ರೌಢ ಶಿಕ್ಷಣ ಮಂಡಳಿ ಜೂನ್ 1 ರಿಂದ 12ನೇ ತರಗತಿ ಪರೀಕ್ಷೆಗಳನ್ನು ಮನೆಯಿಂದಲೇ ನಡೆಸಲು ಮುಂದಾಗಿದೆ.

ಜೂನ್ 1 ರಿಂದ 5 ನೇ ತಾರೀಖಿನ ನಡುವೆ ಯಾವುದೇ ದಿನದಂದು ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಬಹುದು. ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಮತ್ತು ಖಾಲಿ ಉತ್ತರ ಪತ್ರಿಕೆ ಪಡೆದುಕೊಂಡ ದಿನದಿಂದ 5 ದಿನಗಳ ಒಳಗೆ ಆಯಾ ಕೇಂದ್ರಗಳಲ್ಲಿ ಉತ್ತರ ಪ್ರತಿಗಳನ್ನು ಸಲ್ಲಿಸಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...