alex Certify ಶಾಕಿಂಗ್​: ಕೇವಲ 7 ಗಂಟೆ ಅವಧಿಯಲ್ಲಿ ಬರೋಬ್ಬರಿ 101 ಮಂದಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಪೂರೈಸಿದ ವೈದ್ಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​: ಕೇವಲ 7 ಗಂಟೆ ಅವಧಿಯಲ್ಲಿ ಬರೋಬ್ಬರಿ 101 ಮಂದಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಪೂರೈಸಿದ ವೈದ್ಯ….!

ಸರ್ಕಾರದ ವತಿಯಿಂದ ನಡೆಸಲಾಗುತ್ತಿದ್ದ ಸಂತಾನ ಹರಣ ಶಸ್ತ್ರಚಿಕಿತ್ಸೆ ಕ್ಯಾಂಪ್​​ನಲ್ಲಿ ಭಾಗಿಯಾಗಿದ್ದ ವೈದ್ಯನ ವಿರುದ್ಧ ತನಿಖೆ ನಡೆಸುವಂತೆ ಛತ್ತೀಸಗಢ ಸರ್ಕಾರ ಆದೇಶ ನೀಡಿದೆ.

ಸುರ್ಗುಜಾ ಜಿಲ್ಲೆಯಲ್ಲಿ ನಡೆದ ಕ್ಯಾಂಪ್​ನಲ್ಲಿ ವೈದ್ಯನೊಬ್ಬ ಕೇವಲ 7 ಗಂಟೆ ಅವಧಿಯಲ್ಲಿ ಬರೋಬ್ಬರಿ 101 ಮಹಿಳೆಯರಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದರು. ಈ ಕ್ಯಾಂಪ್​​ ಅಗಸ್ಟ್​ 27ರಂದು ನಡೆದಿತ್ತು.

ಸಂತಾನಹರಣ ಶಸ್ತ್ರಚಿಕಿತ್ಸೆ ಶಿಬಿರಕ್ಕೆ ಸಂಬಂಧಿಸದಂತೆ ದೂರುಗಳು ಕೇಳಿ ಬಂದ ಬಳಿಕ ತನಿಖೆಗೆ ಆದೇಶಿಸಲಾಗಿದೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಛತ್ತೀಸಗಢ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಅಲೋಕ್​ ಶುಕ್ಲಾ ಹೇಳಿದ್ರು.

ಈ ಶಿಬಿರದಲ್ಲಿ ಕೇವಲ 7 ಗಂಟೆ ಅವಧಿಯಲ್ಲಿ 101 ಮಹಿಳೆಯರ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆದರೆ ಈ ಎಲ್ಲಾ ಮಹಿಳೆಯರು ಆರೋಗ್ಯವಾಗಿಯೇ ಇದ್ದಾರೆ ಎನ್ನಲಾಗಿದೆ. ಆದರೂ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಓರ್ವ ಶಸ್ತ್ರಚಿಕಿತ್ಸಕ 1 ದಿನದಲ್ಲಿ ಗರಿಷ್ಟ 30 ಶಸ್ತ್ರಚಿಕಿತ್ಸೆಯನ್ನು ಮಾಡಬಹುದು. ಈ ಮಾರ್ಗಸೂಚಿಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ ಎಂದು ಶುಕ್ಲಾ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...