ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ಅರ್ಜಿ ತಿದ್ದುಪಡಿಗೆ ಅವಕಾಶ ನೀಡಿದೆ. ಶಾಲಾ, ಕಾಲೇಜುಗಳ ವಿವರಗಳ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.
ಸಿಇಟಿ ಆನ್ಲೈನ್ ಅರ್ಜಿಯಲ್ಲಿ ಅಭ್ಯರ್ಥಿಗಳು ದಾಖಲಿಸಿದ ಶಾಲಾ-ಕಾಲೇಜುಗಳಲ್ಲಿನ ವ್ಯಾಸಂಗ ಅವಧಿ, ತೇರ್ಗಡೆ ವರ್ಷ ಮೊದಲಾದ ವಿವರ ಆಧರಿಸಿ ಬಿಇಒ ಪರಿಶೀಲನೆ ನಡೆಸಲಿದ್ದಾರೆ.
ಒಂದು ವೇಳೆ ಅಭ್ಯರ್ಥಿಗಳು ನಮೂದಿಸಿದ ಶಾಲೆ, ಕಾಲೇಜುಗಳಲ್ಲಿನ ವ್ಯಾಸಂಗದ ಅವಧಿ, ತೇರ್ಗಡೆ ವರ್ಷ, ಅರ್ಹತಾ ವಿವರ ತಿದ್ದುಪಡಿ ಮಾಡಬೇಕಾಗಿದ್ದಲ್ಲಿ ಜುಲೈ 15 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಇದರ ಹೊರತಾಗಿ ಬೇರೆ ತಿದ್ದುಪಡಿಗೆ ಅವಕಾಶ ಇರುವುದಿಲ್ಲ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಸುಗಮವಾಗಿ ನಡೆಸಲು 8 ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳ ಅಧಿಕಾರಿ ಮತ್ತು ಸಿಬ್ಬಂದಿ ಜೂನ್ 27ರಿಂದ ಜುಲೈ 15ರವರೆಗೆ ಪ್ರಾಧಿಕಾರದ ಕಚೇರಿಯಲ್ಲಿ ಹಾಜರಿರುತ್ತಾರೆ. ಈಗಾಗಲೇ ಪ್ರಕಟಿಸಲಾದ ವೇಳಾಪಟ್ಟಿಯಂತೆ ಅಭ್ಯರ್ಥಿಗಳು ಪರಿಶೀಲನೆಗೆ ಹಾಜರಾಗಬೇಕು ಎಂದು ಹೇಳಲಾಗಿದೆ.