
ಬೆಂಗಳೂರು: ಇಂಜಿನಿಯರಿಂಗ್ ಕೋರ್ಸ್ ಗಳ ಪ್ರವೇಶಕ್ಕೆ ಪ್ರಸಕ್ತ ಸಾಲಿನ ಸಿಇಟಿ ಪರಿಷ್ಕೃತ RANKING ಪಟ್ಟಿಯನ್ನು ಸೆಪ್ಟಂಬರ್ 29 ರ ಬದಲಿಗೆ ಅಕ್ಟೋಬರ್ 1 ರಂದು ಪ್ರಕಟವಾಗಲಿದೆ. ಅಕ್ಟೋಬರ್ 3 ರಿಂದ ಕೌನ್ಸೆಲಿಂಗ್ ಪ್ರಕ್ರಿಯೆ ಪ್ರಾರಂಭಿಸಲಾಗುವುದು.
ಇಂದು ಸಿಇಟಿ ರ್ಯಾಂಕಿಂಗ್ ಪಟ್ಟಿ ಪ್ರಕಟವಾಗಬೇಕಿತ್ತು. ಎರಡು ದಿನ ತಡವಾಗಿ ಪಟ್ಟಿಯನ್ನು ಪ್ರಕಟಿಸಲಾಗುವುದು. ಪರಿಸ್ಕೃತ ರ್ಯಾಂಕಿಂಗ್ ನಿಂದ ತಮ್ಮ ರ್ಯಾಂಕಿಂಗ್ ನಲ್ಲಿ ಏರುಪೇರು ಆಗುವ ಹಾಗೂ ಸೀಟು ಕೈತಪ್ಪುವ ಆತಂಕದಲ್ಲಿ ಸಾವಿರಾರು ವಿದ್ಯಾರ್ಥಿಗಳು ಇದ್ದು, ರಾಂಕಿಂಗ್ ಪಟ್ಟಿ ಮುಂದೂಡಿರುವುದರಿಂದ ಮತ್ತೆ ಆತಂಕ ಹೆಚ್ಚಾಗಿದೆ.
ಅಕ್ಟೋಬರ್ 3ರಿಂದ ಕೌನ್ಸೆಲಿಂಗ್ ಆರಂಭವಾಗಲಿದೆ. ಪಟ್ಟಿ ಪ್ರಕಟವಾದ ಬಳಿಕ ಅಧಿಕೃತ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.