ಬೆಂಗಳೂರು: UGCET ಎಂಜಿನಿಯರಿಂಗ್ ಇತ್ಯಾದಿ ಕೋರ್ಸ್ ಗಳ ಪ್ರವೇಶಕ್ಕೆ ಇದುವರೆಗೂ ಸೀಟು ಸಿಗದೇ ಇರುವವರು, ಮೊದಲ ಸುತ್ತಿನಲ್ಲಿ Choice & Options ದಾಖಲು ಮಾಡದವರಿಗೆ 2nd Extended ಸುತ್ತಿನಲ್ಲಿ ಭಾಗವಹಿಸಲು Options ದಾಖಲಿಗೆ ಸೆ.30ರಿಂದ ಅವಕಾಶ ನೀಡಲಾಗುವುದು.
ಯುಜಿಸಿಇಟಿ-2024 – ಎರಡನೇ ಮುಂದುವರಿದ ಸುತ್ತಿನ ವೇಳಾಪಟ್ಟಿ ಇಂಜಿನಿಯರಿಂಗ್, ಆರ್ಕಿಟೆಕ್ಟರ್, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನ, ವೆಟರಿನರಿ, ಬಿಎಸ್ಸಿ (ನರ್ಸಿಂಗ್) ಬಿ-ಫಾರ್ಮ, ಫಾರ್ಮ್-ಡಿ ಮುಂತಾದ ಕೋರ್ಸುಗಳಿಗೆ ಚಾಯ್ಸ್ ದಾಖಲಿಸಬಹುದು.
ಸೀಟ್ ಮ್ಯಾಟಿಕ್ಸ್‌ನಲ್ಲಿ ಸೀಟುಗಳ ಲಭ್ಯತೆಯನ್ನು ತೋರಿಸದಿದ್ದರೂ ಸಹ ಅಭ್ಯರ್ಥಿಗಳು ಆದ್ಯತೆಗಳನ್ನು ಬದಲಾಯಿಸಲು / ಮಾರ್ಪಡಿಸಲು / ಸೇರಿಸಲು ಸಲಹೆ ನೀಡಲಾಗಿದೆ. ಯಾಕೆಂದರೆ ಸೀಟು ಹಂಚಿಕೆಯ ಕಾರ್ಯದಲ್ಲಿ ಉದ್ಭವಿಸುವ ಸೀಟುಗಳನ್ನೂ ಸಹ ಹಂಚಿಕೆ ಮಾಡುವುದರಿಂದ ಅಭ್ಯರ್ಥಿಗಳು ಆಯ್ಕೆಗಳನ್ನು ನಮೂದಿಸಿದ್ದಲ್ಲಿ ಅಂತಹ ಸೀಟುಗಳನ್ನು ಪಡೆಯಬಹುದಾಗಿದೆ.
ಅ. 7 ರಂದು ಎರಡನೇ ಮುಂದುವರಿದ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಪ್ರಕಟಣೆ
ಅ 8 ರಂದು ಎರಡನೇ ಮುಂದುವರಿದ ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಪ್ರಕಟಣೆ
ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡುವುದು ಮತ್ತು ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳುವುದು (ಹಿಂದಿನ ಸುತ್ತಿನಲ್ಲಿ ಶುಲ್ಕವನ್ನು ಪಾವತಿಸಿದ್ದರೆ ಈ ಸುತ್ತಿನಲ್ಲಿ ಹಂಚಿಕೆಯಾದ ಸೀಟಿಗೆ ಹೊಂದಾಣಿಕೆ ಮಾಡಲಾಗುವುದು.)
ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಕೊನೆಯ ದಿನಾಂಕ ಅ. 10 ಆಗಿರುತ್ತದೆ ಎಂದು ಕೆಇಎ ತಿಳಿಸಿದೆ.
ಅಭ್ಯರ್ಥಿಗಳು ಮೊದಲನೇ ಸುತ್ತಿನಲ್ಲಿ ಅಥವಾ ಎರಡನೇ ಸುತ್ತಿನಲ್ಲಿ ತಮಗೆ ದೊರೆತಿರುವ ಸೀಟು ರದ್ದುಪಡಿಸಿಕೊಳ್ಳಬೇಕಾದಲ್ಲಿ ಸೀಟು ರದ್ದತಿ ಮೂಲಕ 03-10-2024 ಬೆ. 11.00 ರೊಳಗಾಗಿ ರದ್ದುಪಡಿಸಿಕೊಳ್ಳಬಹುದು, ಅಂತಹ ಅಭ್ಯರ್ಥಿಗಳಿಗೆ 5,000 ರೂ.ಕಟಾವು ಮಾಡಿಕೊಂಡು ಉಳಿದ ಮೊತ್ತವನ್ನು ಹಿಂದಿರುಗಿಸಲಾಗುವುದು. ಎರಡನೇ ಮುಂದುವರಿದ ಸುತ್ತಿನ ಸೀಟು ಹಂಚಿಕೆಯ ನಂತರ ಇಂಜಿನಿಯರಿಂಗ್ ಸೀಟನ್ನು ರದ್ದುಪಡಿಸಿಕೊಂಡಲ್ಲಿ, ಸರ್ಕಾರವು ನಿಗದಿ ಪಡಿಸುವ ಇಂಜಿನಿಯರಿಂಗ್ ಶುಲ್ಕವನ್ನು ಮತ್ತು ಶುಲ್ಕದ ಐದು ಪಟ್ಟು ದಂಡವನ್ನು ಕಡ್ಡಾಯವಾಗಿ ಎಲ್ಲಾ ವರ್ಗದ ಅಭ್ಯರ್ಥಿಗಳು ಪ್ರಾಧಿಕಾರಕ್ಕೆ ಸಂದಾಯ ಮಾಡಬೇಕು ಎಂದು ಹೇಳಲಾಗಿದೆ.
Phone: 080-23 564 583
e-mail: keauthority-ka@nic.in
Helpline: 080-23 460 460.
Website: http://kea.kar.nic.in