
ಬೆಂಗಳೂರು: ಸಿಇಟಿ, ಪಿಜಿ ಸಿಇಟಿ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. ಪ್ರಸಕ್ತ ಸಾಲಿನ ಎರಡನೇ ಅಥವಾ ಮೂರನೇ ಸೆಮಿಸ್ಟರ್ ಇಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ನಡೆಸಲಾಗುವ ಡಿಪ್ಲೋಮಾ ಸಿಇಟಿಯನ್ನು ಸೆಪ್ಟೆಂಬರ್ 10ರ ಬದಲಿಗೆ ಸೆಪ್ಟೆಂಬರ್ 9 ರಂದೇ ನಡೆಸಲಾಗುತ್ತದೆ.
ಸೆಪ್ಟೆಂಬರ್ 10ರಂದು ಪೊಲೀಸ್ ಇಲಾಖೆ ಪರೀಕ್ಷೆ ಇರುವುದರಿಂದ ಒಂದು ದಿನ ಮೊದಲೇ ಡಿಪ್ಲೋಮೋ ಸಿಇಟಿ ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್. ರಮ್ಯಾ ತಿಳಿಸಿದ್ದಾರೆ.
ಎಂಬಿಎ, ಎಂಸಿಎ, ಎಂಟೆಕ್ ಸೇರಿದಂತೆ ಉಳಿದ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಸೆಪ್ಟಂಬರ್ 9 ಮತ್ತು 10ರಂದು ನಿಗದಿಯಾಗಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಮುಂದುಡಲಾಗಿದ್ದು, ಹೊಸ ದಿನಾಂಕಗಳ ಬಗ್ಗೆ ಶೀಘ್ರವೇ ವೆಬ್ಸೈಟ್ ನಲ್ಲಿ ಮಾಹಿತಿ ಪ್ರಕಟಿಸುವುದಾಗಿ ಹೇಳಲಾಗಿದೆ.