alex Certify ‘CET’ ಅರ್ಹತೆ ಪಡೆದ ವಿಶೇಷ ಅಭ್ಯರ್ಥಿಗಳ ಗಮನಕ್ಕೆ : ಜುಲೈ 18 ರಿಂದ ದಾಖಲೆಗಳ ಪರಿಶೀಲನೆ ಆರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘CET’ ಅರ್ಹತೆ ಪಡೆದ ವಿಶೇಷ ಅಭ್ಯರ್ಥಿಗಳ ಗಮನಕ್ಕೆ : ಜುಲೈ 18 ರಿಂದ ದಾಖಲೆಗಳ ಪರಿಶೀಲನೆ ಆರಂಭ

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಯುಜಿ ಸಿಇಟಿ-2023ರ ವೃತ್ತಿಪರ ಕೋರ್ಸ್ ಗಳ ಪ್ರವೇಶಾತಿಗೆ ಸಿಇಟಿ ರ್ಯಾಂಕ್ ಪಡೆದ ಹೊರನಾಡು, ಗಡಿನಾಡು, ಮಾಜಿ ಸೈನಿಕರು ಸೇರಿದಂತೆ ವಿಶೇಷ ಅರ್ಹತಾ ವಲಯದ ಅಭ್ಯರ್ಥಿಗಳ ದಾಖಲಾತಿ ಪರಿಶೀಲನಾ ಕಾರ್ಯವನ್ನು ಜುಲೈ 18 ರಿಂದ 21 ರವರೆಗೆ ನಡೆಸಲಿದೆ.

ಈ ನಾಲ್ಕು ದಿನಗಳು ಕೂಡ ಬೆಳಗ್ಗೆ 9:30 ರಿಂದ ದಾಖಲಾತಿ ಪರಿಶೀಲನಾ ಕಾರ್ಯ ಆರಂಭವಾಗಲಿದ್ದು, ಮಾಹಿತಿಗೆ ಪ್ರಾಧಿಕಾರದ ಜಾಲತಾಣ ವೀಕ್ಷಿಸಬಹುದಾಗಿದೆ ಎಂದು ಪರೀಕ್ಷಾ ಪ್ರಾಧಿಕಾರದ ಜಾಲತಾಣ http://kea.kar.nic.in ವೀಕ್ಷಿಸಬಹುದು ಎಂದು ನಿರ್ದೇಶಕಿ ಎಸ್ ರಮ್ಯಾ ಹೇಳಿದ್ದಾರೆ. ವಿವಿಧ ವ್ಯಾಸಂಗ ಪ್ರಮಾಣ ಪತ್ರ ಪರಿಶೀಲನೆ, ಆನ್ಲೈನ್ ದಾಖಲಾತಿ ಪರಿಶೀಲನೆಯ ಬಗ್ಗೆ ಪ್ರಾಧಿಕಾರದ ವೆಬ್ಸೈಟಿನಲ್ಲಿ ಪೋಸ್ಟ್ ಮಾಡಿರುವ ಸೂಚನೆಗಳನ್ನು ಮತ್ತು ಮಾರ್ಗದರ್ಶನಗಳನ್ನು ಅಭ್ಯರ್ಥಿಗಳು ಮತ್ತು ಪೋಷಕರು ಓದಿಕೊಳ್ಳುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ, ಅಲ್ಲಿ ಇರುವ ಯುಜಿಸಿಇಟಿ 2023ರ ಮಾಹಿತಿ ಪುಸ್ತಕವನ್ನು ಡೌನ್ಲೋಡ್ ಮಾಡಿಕೊಂಡು, ಪರಿಶೀಲಿಸಿಕೊಳ್ಳಬಹುದಾಗಿದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...