ಬೆಂಗಳೂರು: ಇಂಜಿನಿಯರಿಂಗ್ ಶಿಕ್ಷಣ ಪ್ರವೇಶಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೌನ್ಸೆಲಿಂಗ್ ಮುಗಿದ ನಂತರ ಕಾಮೆಡ್ –ಕೆ ಕೌನ್ಸೆಲಿಂಗ್ ನಡೆಸುವಂತೆ ಉನ್ನತ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ರಾಜ್ಯದ ಖಾಸಗಿ ಅನುದಾನ ರಹಿತ ಇಂಜಿನಿಯರಿಂಗ್ ಕಾಲೇಜುಗಳ ಸಂಘಕ್ಕೆ ಉನ್ನತ ಶಿಕ್ಷಣ ಇಲಾಖೆಯಿಂದ ಈ ಕುರಿತಾಗಿ ಸೂಚನೆ ನೀಡಲಾಗಿದೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಅವರು ಖಾಸಗಿ ಅನುದಾನ ರಹಿತ ಇಂಜಿನಿಯರಿಂಗ್ ಕಾಲೇಜುಗಳ ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಈ ಕುರಿತಾಗಿ ಸೂಚನೆ ನೀಡಿದ್ದಾರೆ.
ಸಿಇಟಿ ಕೌನ್ಸೆಲಿಂಗ್ ಮತ್ತು ಕಾಮೆಡ್ -ಕೆ ಕೌನ್ಸೆಲಿಂಗ್ ಗೆ ದಿನಾಂಕ ನಿಗದಿಪಡಿಸುವ ಕುರಿತಂತೆ ಸೆಪ್ಟೆಂಬರ್ 13 ರಂದು ಮತ್ತೊಂದು ಸಭೆ ನಡೆಸಲಾಗುವುದು. ಸಿಇಟಿ ರ‍್ಯಾಂಕಿಂಗ್ ಬಗ್ಗೆ ಉಂಟಾಗಿರುವ ಬಿಕಟ್ಟಿನ ಬಗ್ಗೆ ಖಾಸಗಿ ಅನುದಾನ ರಹಿತ ಎಂಜಿನಿಯರಿಂಗ್ ಕಾಲೇಜುಗಳ ಪ್ರತಿನಿಧಿಗಳಿಗೆ ಸಚಿವರು ವಿವರ ನೀಡಿದ್ದಾರೆ.