ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶಕ್ಕೆ ಸಂಬಂಧಿಸಿದಂತೆ ನಡೆಯುವ ಸಿಇಟಿ ಕುರಿತು ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಮೊದಲ ಸುತ್ತಿನಲ್ಲಿ ಸೀಟು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳು ಕಾಲೇಜಿಗೆ ಪ್ರವೇಶ ಪಡೆಯಲು ನವೆಂಬರ್ 7ರ ವರೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.
ವಿದ್ಯಾರ್ಥಿಗಳಿಗೆ ಹಂಚಿಕೆಯಾದ ನಾಲ್ಕು ಆಯ್ಕೆಗಳಲ್ಲಿ ಸೂಕ್ತ ಕೋರ್ಸ್ ಹಾಗೂ ಕಾಲೇಜು ಆಯ್ಕೆ ಮಾಡಿಕೊಳ್ಳಲು ನವೆಂಬರ್ 6 ರ ವರೆಗೆ ಅವಕಾಶವಿರಲಿದ್ದು, ಆ ಬಳಿಕ ಶುಲ್ಕ ಪಾವತಿಸಲು, ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ನವೆಂಬರ್ 7ರ ವರೆಗೆ ಅವಕಾಶವಿರಲಿದೆ.
ಇನ್ನು ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಗಳ ಕುರಿತಂತೆ ವಿದ್ಯಾರ್ಥಿಗಳು ತಮ್ಮ ಆಯ್ಕೆಯನ್ನು ದಾಖಲಿಸಲು ನವೆಂಬರ್ 6 ರ ವರೆಗೆ ಸಮಯ ನೀಡಲಾಗಿದ್ದು, ನವೆಂಬರ್ 7ರಂದು ಅಣಕು ಸೀಟು ಹಂಚಿಕೆ ಪ್ರಕಟಿಸಲಾಗುತ್ತದೆ. ವಿದ್ಯಾರ್ಥಿಗಳು ಆ ದಿನವೇ ತಮ್ಮ ಆಯ್ಕೆಗಳನ್ನು ಬದಲಿಸಬಹುದಾಗಿದ್ದು, ನೈಜ ಸೀಟು ಹಂಚಿಕೆಯನ್ನು ನವೆಂಬರ್ 11ರಂದು ಪ್ರಕಟಿಸಲಾಗುತ್ತದೆ.