ಗರ್ಭಾಶಯದ ಮುಖ್ಯದ್ವಾರವನ್ನು ಗರ್ಭಕಂಠ ಎಂದು ಕರೆಯಲಾಗುತ್ತದೆ. ಗರ್ಭಕಂಠದಲ್ಲಿ ಕೋಶಗಳು ಅನಿಯಮಿತವಾಗಿ ಬೆಳೆಯಲು ಪ್ರಾರಂಭಿಸಿದಾಗ, ಅದನ್ನು ಗರ್ಭಕಂಠದ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಪ್ರಪಂಚದಲ್ಲಿ ಸುಮಾರು 10 ಮಹಿಳೆಯರಲ್ಲಿ ಒಬ್ಬರಿಗೆ ಈ ಕ್ಯಾನ್ಸರ್ ಕಂಡು ಬರುತ್ತದೆ. ಆರಂಭದಲ್ಲಿ ಇದು ಪತ್ತೆಯಾದ್ರೆ, ಇದಕ್ಕೆ ಚಿಕಿತ್ಸೆ ಪಡೆಯಬಹುದು.
ಇದರ ಲಕ್ಷಣಗಳು ತುಂಬಾ ಸಾಮಾನ್ಯವಾಗಿವೆ. ಹಾಗಾಗಿ ಪತ್ತೆ ಹಚ್ಚುವುದು ಕಷ್ಟ. ಆದ್ರೆ ಕೆಲವೊಂದು ಲಕ್ಷಣಗಳ ಮೂಲಕ ಪತ್ತೆ ಮಾಡಬಹುದು. ಅತಿಯಾದ ರಕ್ತಸ್ರಾವ, ಲೈಂಗಿಕತೆಯ ನಂತರ ಯೋನಿಯಲ್ಲಿ ನೋವು, ಮುಟ್ಟು ಮುಗಿದ ನಂತ್ರವೂ ಸೋರಿಕೆಯಾಗ್ತಿದ್ದರೆ, ಅದು ಗರ್ಭಕಂಠದ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ಕೆಲವರಿಗೆ ಮೂತ್ರ ಮಾಡುವಾಗ ನೋವು ಕಾಡುತ್ತದೆ. ಕೆಲವು ಮಹಿಳೆಯರು ವೇಗವಾಗಿ ತೂಕ ಕಳೆದುಕೊಳ್ಳುತ್ತಾರೆ. ಹಸಿವೆಯಾಗುವುದಿಲ್ಲ. ಇದ್ರಲ್ಲಿ ಯಾವುದೇ ರೋಗ ಲಕ್ಷಣ ಕಂಡು ಬಂದ್ರೂ ವೈದ್ಯರನ್ನು ಸಂಪರ್ಕಿಸಿ.
ಇದು ಬರದಂತೆ ತಡೆಯಲು ಹದಿಹರೆಯದ ಹುಡುಗಿಯರು ಎಚ್‌ವಿಪಿ ಲಸಿಕೆ ಪಡೆಯಬೇಕು. ಪುನರಾವರ್ತಿತ ಗರ್ಭಧಾರಣೆಯನ್ನು ತಪ್ಪಿಸಬೇಕು. ಹೊಟ್ಟೆಯ ಕೆಳ ಭಾಗದಲ್ಲಿ ಅಂದರೆ ಸೊಂಟದಲ್ಲಿ ನೋವು ಇದ್ದರೆ ಅದನ್ನು ನಿರ್ಲಕ್ಷಿಸಬಾರದು. 30 ರ ನಂತರ, ವರ್ಷಕ್ಕೊಮ್ಮೆ ಪ್ಯಾಪ್ ಸಿಮ್ಮರ್ ಟೆಸ್ಟ್ ಮಾಡಿಸಬೇಕು. ಅನೇಕರ ಜೊತೆ ಸಂಬಂಧ ಬೆಳೆಸುವುದನ್ನು ತಪ್ಪಿಸಬೇಕು.
ಗರ್ಭಕಂಠದ ಕ್ಯಾನ್ಸರ್ ಗೆ ಚಿಕಿತ್ಸೆಯಿದೆ. ರೋಗವನ್ನು ಸರಿಯಾದ ಸಮಯದಲ್ಲಿ ಪತ್ತೆ ಮಾಡಿದರೆ, ನಂತರ ಪರಿಸ್ಥಿತಿಯನ್ನು ಅವಲಂಬಿಸಿ ಚಿಕಿತ್ಸೆಯನ್ನು ಮಾಡಲಾಗುತ್ತದೆ. ಕ್ಯಾನ್ಸರ್ ಹಂತಕ್ಕೆ ಅನುಗುಣವಾಗಿ ಚಿಕಿತ್ಸೆಯನ್ನು ಮಾಡಲಾಗುತ್ತದೆ.