ನವದೆಹಲಿ: 5-12 ವರ್ಷ ವಯಸ್ಸಿನ ಮಕ್ಕಳಿಗೆ ಬಯಾಲಜಿಕಲ್ ಇ ತಯಾರಿಸಿದ ಕಾರ್ಬೆವಾಕ್ಸ್ ಮತ್ತು ಭಾರತ್ ಬಯೋಟೆಕ್ ನ ಕೋವಾಕ್ಸಿನ್ ಬಳಕೆಗೆ NTAGI ಯ ಸ್ಥಾಯಿ ತಾಂತ್ರಿಕ ಉಪ ಸಮಿತಿ(STSC) ಶಿಫಾರಸು ಮಾಡಿದೆ.
ಕಾರ್ಬೆವಾಕ್ಸ್ ಅನ್ನು 5-12 ವರ್ಷ ವಯಸ್ಸಿನ ಮಕ್ಕಳಿಗೆ ಶಿಫಾರಸು ಮಾಡಲಾಗಿದೆ, ಕೋವಾಕ್ಸಿನ್ ಅನ್ನು 6 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಶಿಫಾರಸು ಮಾಡಲಾಗಿದೆ.
ಏಪ್ರಿಲ್ 26 ರಂದು, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(DCGI) ಭಾರತ್ ಬಯೋಟೆಕ್ ಗೆ 6 ರಿಂದ 12 ವರ್ಷ ವಯಸ್ಸಿನವರಿಗೆ ಕೋವಾಕ್ಸಿನ್ ಬಳಸಲು ಅನುಮತಿ ನೀಡಿದೆ. ಏಪ್ರಿಲ್ ನಲ್ಲಿ ಡಿಸಿಜಿಐ ಭಾರತದ ಡ್ರಗ್ ರೆಗ್ಯುಲೇಟರ್ ನ ಪರಿಣಿತ ಸಮಿತಿಯು 5 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಬಯಾಲಜಿಲ್ ಇ ತಯಾರಿಸಿದ ಕೋವಿಡ್ -19 ಲಸಿಕೆ ಕಾರ್ಬೆವಾಕ್ಸ್ ತುರ್ತು ಬಳಕೆಗೆ ಶಿಫಾರಸು ಮಾಡಿದೆ.