ನವದೆಹಲಿ: ಕಳೆದ 9 ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರ ಆಡಳಿತವನ್ನು ಸುಲಭಗೊಳಿಸಲು ಮತ್ತು ವ್ಯವಹಾರವನ್ನು ಸುಲಭಗೊಳಿಸಲು 2,000 ಕ್ಕೂ ಹೆಚ್ಚು ನಿಯಮಗಳು ಮತ್ತು ಕಾನೂನುಗಳನ್ನು ರದ್ದುಗೊಳಿಸಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಭಾನುವಾರ ಹೊರಡಿಸಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಿಂದಿನ ಸರ್ಕಾರಗಳು ಯಥಾಸ್ಥಿತಿವಾದಿ ವಿಧಾನ ಕಂಡುಕೊಂಡಿದ್ದವು. ಆದರೆ, ಪ್ರಧಾನಿ ಮೋದಿ ಅಂತಹ ನಿಯಮಗಳನ್ನು ತೆಗೆದುಹಾಕುವ ಧೈರ್ಯ ಮತ್ತು ದೃಢತೆಯನ್ನು ಪ್ರದರ್ಶಿಸಿದ್ದಾರೆ. ಅವುಗಳಲ್ಲಿ ಹಲವು ಬ್ರಿಟಿಷ್ ರಾಜ್ ಕಾಲದಿಂದಲೂ ಉಳಿದುಕೊಂಡಿದ್ದವು ಮತ್ತು ನಾಗರಿಕರಿಗೆ ಅನಾನುಕೂಲತೆಯನ್ನು ಉಂಟುಮಾಡಿದ್ದವು. ಅಂತಹ ಕಾನೂನು, ನಿಯಮಗಳನ್ನು ಕೈಬಿಡಲಾಗಿದ್ದು, ಉತ್ತಮ ಆಡಳಿತದ ಅಂತಿಮ ಗುರಿ ನಾಗರಿಕರಿಗೆ ಜೀವನವನ್ನು ಸುಲಭಗೊಳಿಸುವುದಾಗಿದೆ ಎಂದು ಸಚಿವರು ಹೇಳಿದರು.